ರಾಜಕೀಯಕ್ಕೆ ಹವಿಸ್ಸಾದ ಪರೇಶ್ ಮೆಸ್ತಾ ಸಾವು

ಪರೇಶ್ ಮೇಸ್ತಾ ಕುಟುಂಬದ ಗೋಳು ಕೇಳುವವರಿಲ್ಲ

ಭಟ್ಕಳ: ಕಳೆದ ಬಾರಿ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ನನ್ನ ಮಗನನ್ನು ಕಳೆದುಕೊಂಡಿದ್ದ ಆದರೆ ಇದನ್ನು ಬಿಜೆಪಿಯವರು ತನ್ನ ರಾಜಕೀಯಕ್ಕೆ ಬಳಸಿ ನನ್ನ ಮಗನ ಸಾವಿಗೂ ನ್ಯಾಯ ಕೊಡದ ಅನ್ಯಾಯ ಮಾಡಿದ್ದಾರೆ’ ಎಂದು ಪರೇಶ್‌ ಮೇಸ್ತನ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇಸ್ತ ಎನ್ನುವ ಅಮಾಯಕ ಯುವಕ ನಾಪತ್ತೆಯಾಗಿ ಎರಡು ದಿನಗಳ ನಂತರ ಪಟ್ಟಣದ ಶೆಟ್ಟಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಇದನ್ನೇ ರಾಜಕೀಯ ಅಸ್ತವಾಗಿ ಬಳಸಿ ಅಧಿಕಾರ ಹಿಡಿದರು ಯಶಸ್ವಿಯಾಗಿದ್ದ ಬಿಜೆಪಿ ನಾಯಕರು ಅಧಿಕಾರ ಸಿಕ್ಕ ತಕ್ಷಣ ಪರೇಶ್ ಮೇಸ್ತಾ ಕುಟುಂಬವನ್ನು ಕೈ ಬಿಟ್ಟುಬಿಟ್ಟಿತು.

ನಂತರದ ದಿನಗಳಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಅವರ ಆಡಳಿತದ ವಿರುದ್ಧ ಯಾರೇ ಧ್ವನಿ ಎತ್ತಿದರೂ ಅವರನ್ನು ದೇಶ ದ್ರೋಹಿ ಹಿಂದೂ ವಿರೋಧಿ ಎನ್ನುವಂತೆ ಬಿಂಬಿಸುವ ಕಾರ್ಯದಲ್ಲೂ ಬಿಜೆಪಿ ನಾಯಕರು ಯಶಸ್ವಿಯಾದರು.

ಪರೇಶ್‌ ಮೇಸ್ತ ಸಾವನ್ನಪ್ಪಿ ಇಂದಿಗೆ ಆರು ವರ್ಷ ಕಳೆಯಿತು. ಈ ಮದ್ಯ ಸಿ ಬಿ ಐ ಮೇಸ್ತನ ಸಾವು ಸಹಜ ಸಾವು ಎಂದು ಬಿ ರಿಪೋರ್ಟ ಸಲ್ಲಿಸಿತು ಇದೆಲ್ಲದರ ಮದ್ಯ ಪರೇಶ ಮೆಸ್ತಾ ಅವರ ಕುಟುಂಬ ಅನಾಥವಾಗಿ ಹೋಯಿತು ಬಿಜೆಪಿ ಸರಕಾರ ಮೃತ ಪರೇಶ ಮೇಸ್ತನ ತಂದೆಯನ್ನು ಮುಂದಿಟ್ಟುಕೊಂಡು ಬೇಕಾದಾಗ ಎಲ್ಲ ಚುನಾವಣಾ ಅಸ್ರ್ತವಾಗಿ ಬಳಸಿಕೊಂಡಿತು ಆದರೆ ಅಮಾಯಕ ಪರೇಶ ಮೆಸ್ತನ ಕುಟುಂಬಕ್ಕೆ ಯಾವುದೇ ಸಹಾಯವನ್ನು ಒದಗಿಸಲಿಲ್ಲ ಈ ಬಿಜೇಪಿ ಪಕ್ಷ ಇತರ ಪಕ್ಷಗಳು ಮೇಸ್ತನ ಕುಟುಂಬಕ್ಕೆ ಸಹಾಯ ಮಾಡಲು ಬಂದಾಗ ಅದನ್ನು ತಿರಸ್ಕರಿಸುವಂತೆ ಮಾಡಿತು ಜನರಲ್ಲಿ ಕೋಮು ಭಾವನೆ ಕೆರಳಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ಅಮಾಯಕ ಯುವಕರಿಗೆ ಕೋರ್ಟ್ ಆಲಿಯುವು ಮಾಡಿದೆ

ಈಗ ಮತ್ತೆ ಚುನಾವಣೆ ಒಂದಿದೆ .ಅಮಾಯಕ ಪರೇಶ ಮೇಸ್ತಾ ಯಾರಿಗೂ ನೆನಪಿಲ್ಲಾ ಆತನ ಕುಟುಂಬ ಮಗನನ್ಬು ಕಳೆದುಕೊಂಡು ಅನಾಥವಾಗಿದೆ ಆದರೆ ಅಧಿಕಾರ ಮೋಜು ಮಸ್ತಿಯನ್ನು ಮೇಸ್ತನ ಸಮಾದಿಯ ಮೇಲೆ ನಡೆಸಲಾಗುತ್ತಿದೆ ಎಂದರೆ ತಪ್ಪಿಲ್ಲಾ.

WhatsApp
Facebook
Telegram
error: Content is protected !!
Scroll to Top