ಜಾತಿ, ಧರ್ಮದ ಹೆಸರಿನಲ್ಲಿ ಮತ ಕೇಳುವ ನೈತಿಕತೆ ಸುನೀಲ್‌ ಗಿಲ್ಲ:

ಮಂಕಾಳ ವೈದ್ಯ ಕನಿಷ್ಟ 30, 35 ಸಾವಿರ ಮತಗಳ ಅಂತರದಲ್ಲಿ ಜಯಗಳಿಸುತ್ತಾರೆ ಶಂಕರ್ ನಾಯ್ಕ ಚೌತನಿ

ಕಾರವಾರ: ಜಾತಿ, ಧರ್ಮದ ಹೆಸರಿನಲ್ಲಿ ಮತ ಕೇಳುವ ಯಾವ ನೈತಿಕತೆಯೂ ಭಟ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕಗೆ ಇಲ್ಲ ಎಂದು ಹಿಂದೂ ಕಾರ್ಯಕರ್ತ ಶಂಕರ್ ನಾಯ್ಕ ಭಟ್ಕಳ ವಾಗ್ದಾಳಿ ನಡೆಸಿದರು.

ಜಿಲ್ಲಾ ಪತ್ರಿಕಾ ಭವನದಲ್ಲಿ ಮಾತ ನಾಡಿದ ಅವರು, ಹಿಂದುತ್ವದ ಹೆಸರಿನಲ್ಲಿ ಸುನೀಲ್ ನಾಯ್ಕ ವರಾಡುತ್ತಿರುವ ಅವಾಂತರಗಳು ಒಂದೆರಡಲ್ಲ. ಹೀಗಾಗಿ ಸುನೀಲ್‌ಗೆ ಟಿಕೆಟ್‌, ನೀಡಬಾರದು ಎಂದು ಬಿಜೆಪಿಗೆ ಕೇಳಿಕೊಂಡಿದ್ದವು. ಆದರೆ ಬಿಜೆಪಿ ನಾಯಕರು ಸುನೀಲ್ ಆಮಿಷಕ್ಕೆ ಒಳಗಾಗಿ ಅವರಿಗೆ ಟಿಕೆಟ್ ಮಾರಿದ್ದಾರೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿಯ ಪ್ರಬಲ ವಿರೋಧಿ ಅಭ್ಯರ್ಥಿ ಮಂಕಾಳ ವೈದ್ಯ ಅವರಿಗೆ ನಾವೆಲ್ಲರೂ ಬೆಂಬಲಿಸಿ, ಅವರ ಪರ ಪ್ರಚಾರ ಮಾಡುವ ಹಾಗೂ ಅವರನ್ನು ಗೆಲ್ಲಿಸುವ ಕಾರ್ಯ ಮಾಡುತ್ತೇವೆ ಎಂದು ಘೋಷಿಸಿದರು.

ಭಟ್ಕಳ ಕ್ಷೇತ್ರದಲ್ಲಿ ಕನಿಷ್ಟ 200ಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಮಂಕಾಳ ವೈದ್ಯರ ಪರ ಕಾರ್ಯನಿರ್ವಹಿಸುತ್ತಿದ್ದು,

ಅವರನ್ನು 30 ಸಾವಿರ ಲೀಡ್‌ನಲ್ಲಿ ಗೆಲ್ಲಿಸುತ್ತೇವೆ. ಇದು ಬಿಜೆಪಿಯ ಹಿಂದೂ ವಿರೋಧಿ ನೀತಿಗೆ ನಾವು ಹೊಡೆಯುತ್ತಿರುವ ಸೆಡ್ಡು. ಸಂಸದ ಅನಂತಕುಮಾ‌ ಹೆಗಡೆ ಅವರ ಕೃಪಾ ಕಟಾಕ್ಷ ನಮ್ಮ ಮೇಲಿದೆ. ಈ ಧರ್ಮ ಯುದ್ಧದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದ ಅವರು, ಸುನೀಲ್ ನಾಯ್ಕ ವಿರುದ್ಧ ಹಿಂದೂ ವಿರೋಧ ನೀತಿಯನ್ನು ಖಂಡಿಸಿದ್ದಕ್ಕೆ. ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಕ್ಕೆ ನನ್ನ ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗಿತ್ತು. ಆದರೆ ಅದಕ್ಕೂ ಮುಂಚಿತವಾಗಿ ನನ್ನನ್ನು ಹೊನ್ನಾವರ ಪೊಲೀಸರು ಬ೦ಧಿಸಿದ್ದರು. ತದನಂತರ ಭಟ್ಕಳ ಉಪವಿಭಾಗಾಧಿಕಾರಿಗೆ ಒತ್ತಡ ಹೇರಿ ಗಡಿಪಾರು ಆದೇಶ ಹೊರಡಿಸಲಾಗಿದೆ. ಆದರೆ ಹೈಕೋರ್ಟ್ ನನ್ನ ಗಡಿಪಾರಿಗೆ ತಡೆ ನೀಡಿ, ಇದು ರಾಜಕೀಯ ಪ್ರೇರಿತ ಎಂದು ಆದೇಶದಲ್ಲಿ | ತಿಳಿಸಿದೆ ಎಂದರು.

ಭಟ್ಕಳ- ಹೊನ್ನಾವರದಲ್ಲಿ ನಾಲ್ಕು ಮಂದಿಯ ವಿರುದ್ಧ , 25ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಮೇಲೆ ಸುನೀಲ್ ನಾಯ್ಕ ಬೆಂಬಲಿಗರು ಪ್ರಕರಣ ದಾಖಲಿಸಿದ್ದಾರೆ. 100ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಮೇಲೆ ಎನ್ ಸಿ ಕೇಸ್ ದಾಖಲಿಸಲಾಗಿದೆ. ಇದರಲ್ಲಿ | ನಾಮಧಾರಿಗಳೂ ಸೇರಿದ್ದಾ- 11 ರೆ. ಹಾಗಿದ್ದರೆ ಸುನೀಲ್‌ಗೆ ನಾಮಧಾರಿಗಳು ಯಾಕೆ ಮತ ಹಾಕಬೇಕು? ಸುನೀಲ್ ನಾಯ್ಕನಿಗಾಗಿ ಬಿಜೆಪಿ ವಿರುದ್ಧ ಇದ್ದೇವೆ. ಆತನನ್ನು ಠೇವಣಿ ಕಳೆದುಕೊಳ್ಳುವಂತೆ ಮಾಡಿ, ಮಂಕಾಳ ವೈದ್ಯರವರನ್ನು ಕನಿಷ್ಠ 30 ಸಾವಿರ ಮತಗಳಿಂದ ಆರಿಸಿ ತರದಿದ್ದರೆ ನಾವು ಹಿಂದೂಪರ ಹೋರಾಟದಿಂದ ನಿವೃತ್ತಿ ಪಡೆಯುತ್ತೇವೆ ಎಂದು ಶಪಥ ಮಾಡಿದರು.

WhatsApp
Facebook
Telegram
error: Content is protected !!
Scroll to Top