ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ ಚುನಾವಣೆ ಸಮಿಪಿಸುತ್ತಿದ್ದಂತೆ ಘಟಾನುಘಟಿಗಳು ಬಿಜೆಪಿ ಇಂದ ಕಾಂಗ್ರೇಸ್ ಸೇರ್ಪಡೆ

ಸುಲಭದ ಗೆಲುವಿನತ್ತ ದಾಪುಗಾಲಿಡುತ್ತಿರುವ ಮಂಕಾಳು ವೈದ್ಯ

ವೈದ್ಯರ ವಿರೋದಿ ಬಣದಲ್ಲಿ ಹೆಚ್ಚಿದ ತಲ್ಲಣ

ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ಸಮಿಪಿಸುತ್ತಿದಂತೆ ಮಂಕಾಳು ವೈದ್ಯರ ಬಣ ಬಲಿಷ್ಟವಾಗುತ್ತಿದ್ದು ಬಿಜೆಪಿಯ ಘಟಾನುಘಟಿಗಳು ಮಂಕಾಳು ವೈದ್ಯರ ಬಣಕ್ಕೆ ಸೆರ್ಪಡೆಯಾಗುತ್ತಿದ್ದಾರೆ ದಿನೇ ದಿನೇ ಮಂಕಾಳು ವೈದ್ಯರು ತಮ್ಮ ಗೆಲುವಿನತ್ತ ದಾಪುಗಾಳಿಡುತ್ತಿದ್ದಾರೆ ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ

ವಿಧಾನ ಸಭಾ ಚುನಾವಣೆಗೆ ಇನ್ನೆನು ನಾಲ್ಕೈದು ದಿನಗಳಿದೆ ಅಷ್ಟೇ ರಾಜಕಿಯ ಪಕ್ಷಗಳು ಹಾಗು ಚುನಾವಣಾ ಅಭ್ಯರ್ಥಿಗಳು ತಮ್ಮ ಪ್ರಚಾರದ ತೀವೃತೆಯನ್ನು ಹೆಚ್ಚಿಸುತ್ತಿದ್ದಾರೆ ಪ್ರಾರಂಬದಲ್ಲಿ ಪಕ್ಷಗಳ ಮದ್ಯ ಸಮಬಲಗಳು ಕಂಡು ಬಂದಿತ್ತಾದರೂ ಚುನಾವಣೆ ಹತ್ತಿರ ಬರುತ್ತಿದಂತೆ ರಾಜಕಿಯ ಪಕ್ಷಗಳ ಭಲಾಭಲಗಳು ವ್ಯತ್ಯಾಸವನ್ನು ಕಂಡುಕೊಳ್ಳುತ್ತಿದೆ ದಿನಗಳೆದಂತೆ ಮಂಕಾಳು ವೈದ್ಯರ ಬಣವಾದ ಕಾಂಗ್ರೇಸ್ ಪಕ್ಷ ಬಲಗೊಳ್ಳುತ್ತಲೆ ಹೊಗುತ್ತಿದೆ . ಮಂಕಾಳ ವೈದ್ಯರ ವರ್ಚಸ್ಸಿಗೆ ಹೊನ್ನಾವರ ಹೊಳೆಸಾಲು ಹಾಗು ಇತ್ಯಾದಿ ಬಾಗದಿಂದ ಹಿಡಿದು ಉತ್ತರ ಕನ್ನಡ ಗಡಿ ಭಾಗವಾದ ಗೊರ್ಟೆಯ ವರೆಗಿನ ಬಿಜೆಪಿಯ ಘಟಾನುಘಟಿಗಳು ವೈದ್ಯರ ಬಣಕ್ಕೆ ಅಂದರೆ ಕಾಂಗ್ರೇಸಿಗೆ ಸೆರ್ಪಡೆಯಾಗುತ್ತಿದ್ದಾರೆ . ಕರಾವಳಿ ಕರ್ನಾಟಕದ ಮೂವರು ಚುನಾವಣಾ ಅಭ್ಯರ್ಥಿಗಳ ಹೆಸರು ಇಡಿ ರಾಜ್ಯದಾದ್ಯಂತ ಸುದ್ದಿಯಲ್ಲಿದ್ದು ಅದರಲ್ಲಿ ಮಂಕಾಳ ವೈದ್ಯ ಗಂಟಿಹೋಳೆ ಪುತ್ತಿಲಾ ಈ ಹೆಸರುಗಳಲ್ಲಿ ಮಂಕಾಳ ವೈದ್ಯರ ಹೆಸರು ಮುಂಚುಣಿಯಲ್ಲಿದೆ ಎಂದರೆ ತಪ್ಪಾಗಲಿಕ್ಕಿ ಹೀಗೆ ದಿನೆ ದಿನೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ವೈದ್ಯರು ಗೆಲುವಿಗೆ ಹತ್ತಿರವಾಗುತ್ತಿದ್ದಾರೆ ಎನ್ನುವುದು ಕ್ಷೇತ್ರದ ಮತದಾರರ ಮಾತಾಗಿದೆ ಇದಕ್ಕೆ ಒಂದು ಸ್ಪಷ್ಟ ಉದಾಹರಣೆ ಎಂದರೆ ನಿನ್ನೆ ಅಂದರೆ ಬುದವಾರ ಒಂಬತ್ತು ಜನ ಘಟಾನುಘಟಿಗಳು ವೈದ್ಯರ ಬಣವನ್ನು ಸೇರಿಕೊಂಡಿದ್ದಾರೆ ಅವರಲ್ಲಿ ಭಟ್ಕಳದ ಪ್ರಸಿದ್ದ ಕರಾವಳಿ ಹೊಟೇಲ್ ಉದ್ಯಮಿ ತಿಮ್ಮಪ್ಪ ನಾಯ್ಕ , ಮೂಲ ಬಿಜೆಪಿಗ ಮಖಂಡರು , ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಮಾಜಿ ಪುರಸಭಾ ಸದಸ್ಯರಾದ ಸಂದೀಪ್ ಶೇಟ್, D.P ಕಾಲೋನಿಯ ಸಚಿನ್ ನಾಯ್ಕ, ಮಹಾರಾಜ ಹೋಟೆಲ್ ಉದ್ಯಮಿ ಕುಮಾರ್ ನಾಯ್ಕ ಕೊಣೆಮನೆ , ಸಾಮ್ರಾಟ್ ಹೊಟೇಲ್ ಮಾಲಕರು , ಪಿ ಎಲ್ ಡಿ ಬ್ಯಾಂಕ್ ಡೈರೆಕ್ಟರ್ ಹರೀಶ ನಾಯ್ಕ, ಗೊರ್ಟೆ ಸಹರಾ ಹೊಟೇಲ್ ಮಾಲಕ ಲಕ್ಷ್ಮೀಶ್ ನಾಯ್ಕ , ಚಂದ್ರು ನಾಯ್ಕ ಪುರವರ್ಗ ,ಪಂಚಾಯತ್ ಸದಸ್ಯರು ಮಂಜುನಾಥ ನಾಯ್ಕ ಕೋಟೆಬಾಗಿಲು , ಕ್ರಷ್ಣಾ ನಾಯ್ಕ ಶಾರದಹೋಳೆ ಹೀಗೆ ಅನೇಕ ಘಟಾನುಘಟಿಗಳು ಮಂಕಾಳ ವೈದ್ಯರ ವರ್ಚಸ್ಸಿಗೆ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ

ದಿನ ಕಳೆದಂತೆ ಚುನಾವಣೆ ಹತ್ತಿರವಾಗುತ್ತಿದ್ದು ಮಂಕಾಳ ವೈದ್ಯರು ಚುನಾವಣಾ ಕ್ಷೇತ್ರದಲ್ಲಿ ವಿಜ್ರಂಬಿಸುತ್ತಿದ್ದು ವೈದ್ಯರ ವಿರೋದಿ ಬಣದಲ್ಲಿ ಕ್ಷಣ ಕ್ಷಣಕ್ಕೂ ತಲ್ಲಣಗಳು ಹೆಚ್ಚುತ್ತಿದೆ ಹಾಗು ಮಂಕಾಳ ವೈದ್ಯರು ಗೆಲುವಿನತ್ತ ದಾಪುಗಾಲಿಡುತ್ತಿದ್ದಾರೆ ಎನ್ನುವುದು ರಾಜಕೀಯ ಪಂಡಿತರ ಮಾತಾಗಿದೆ.

WhatsApp
Facebook
Telegram
error: Content is protected !!
Scroll to Top