ಜನ ನಾಯಕ ಮಂಕಾಳ ವೈದ್ಯರ ನೇತ್ರತ್ವದಲ್ಲಿ ಬಿಜೆಪಿ ಮುಖಂಡ ಚಂದ್ರಕಾಂತ ನಾಯ್ಕ ಸೇರಿದಂತೆ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೇಸ್ ಸೇರ್ಪಡೆ

ಜನ ನಾಯಕ ಮಾಂಕಾಳ ವೈದ್ಯರ ಜನ ಪರ ಕಾರ್ಯವನ್ನು ಮೆಚ್ಚಿ ಬಿಜೆಪಿ ಪಕ್ಷ ತೊರೆದು ಮಾಂಕಾಳ ವೈದ್ಯರ ಕೈ ಬಲಪಡಿಸುವ ಉದ್ದೇಶದಿಂದ ವೈದ್ಯರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಂಡ ಬಿಜೆಪಿ ಮುಖಂಡ ಚಂದ್ರಕಾಂತ ನಾಯ್ಕ್ ಹಾಗೂ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು

ಹೊನ್ನಾವರ : ತಾಲೂಕಿನ ಹೊಳೆಸಾಲು ಬಾಗದ ಕುದ್ರಿಗಿ ಪಂಚಾಯತ್ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದ ಸಂದರ್ಭ ದಲ್ಲಿ ಬಿಜೆಪಿ ಮುಕಂಡರು ಮಾಜಿ ಬಿಜೆಪಿ ಘಟ ಚಂದ್ರಕಾಂತ ನಾಯ್ಕ್ ಹಾಗೂ 50 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಜನ ನಾಯಕ ಮಾಂಕಾಳ ವೈದ್ಯರ ಕೈ ಬಲಪಡಿಸುವ ಉದ್ದೇಶದಿಂದ ಮಾಂಕಾಳ ವೈದ್ಯರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ವನ್ನು ಸೇರ್ಪಡೆ ಗೊಂಡರು .ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಕಾಂತ ನಾಯ್ಕ್
ಜನ ನಾಯಕ ಮಾಂಕಾಳ ವೈದ್ಯರು ಶಾಸಕರಿರುವಾಗ ನಮ್ಮ ಭಾಗದ ಸುಮಾರು 60 ಪ್ರತಿಶತ ಮೂಲ ಬೂತ ಸೌಕರ್ಯ ಗಳನ್ನ ಕಲ್ಪಿಸಿದ್ದರು ಅದರಲ್ಲೂ ವಿಶೇಷ ವಾಗೀ ಸ್ವಾತಂತ್ರ ಬಂದಾಗಿನಿಂದಲೂ ಶರಾವತಿ ನದಿ ದಾಟಲು ದೋಣಿಯನ್ನು ಅವಲಂಬಿಸಿದ ನಮಗೆ ಸೇತುವೆಯ ಬಾಗ್ಯವನ್ನು ಕಲ್ಪಿಸಿದರು ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 10 ಕೋಟಿಗೂ ಅಧಿಕ ಮಟ್ಟದಲ್ಲಿ ಅಭಿವೃದ್ದಿ ಕಾಮಾರಿಗಳ ಸುರಿಮಳೆ ಹರಿಸಿದ್ದರು.ಅದೆಷ್ಟೋ ಬಡವರಿಗೆ ನಿರ್ಗತಿಕರಿಗೆ ಸಹಾಯ ಹಸ್ತ ಚಾಚಿದ್ದರು ಅದೆಷ್ಟೋ ಬಡ ವಿದ್ಯಾರ್ಥಿ ಗಳ ಪಾಲಿನ ಜ್ಞಾನ ದೀವಿಗೆ ಯಾಗಿದ್ದರು ಅನಾರೋಗ್ಯ ಪೀಡಿತರಿಗೆ ಭರವಸೆಯ ಬೇಳಕಾಗಿದ್ದರು.
ತದ ನಂತರದಲ್ಲಿ ಕಳೆದ 2018 ರ ವಿಧಾನ ಸಭಾ ಚುನಾವಣೆಯಲ್ಲಿ ಕಾರಣಾಂತರದಿಂದ ಅವರ ಸೋಲಾಯಿತು .
ಅವರು ಸೋತರೂ ಕೂಡ ಇಂದು ಸಹ ಬಡವರ ಕಣ್ಣಿರೋರೆಸುವ ಕೆಲಸ ಸದಾಕಾಲ ಮಾಡುತ್ತಿದ್ದಾರೆ ನೊಂದವರ ನೋವಿಗೆ ದನಿಯಾಗಿ ನಿಂತಿದ್ದಾರೆ ಕಲಿಯುವ ವಿದ್ಯಾರ್ಥಿಗಳ ಪಾಲಿಗೆ ಸ್ಫೂರ್ತಿಯ ಚಿಲುಮೆ ಯಾಗಿದ್ದಾರೆ ಅವರ ಕಾರ್ಯವೈಖರಿ ಅವರ ವ್ಯಕ್ತಿತ್ವ ಸೃಜನ ಶೀಲತೆ ಎಲ್ಲರನ್ನೂ ಸಮಾನ ದೃಷ್ಠಿಯಿಂದ ನೋಡುವ ಅವರ ಗುಣವನ್ನು ಮೆಚ್ಚಿ ಇಂದು ಅವರ ಸಮ್ಮುಖದಲ್ಲಿ ಅವರ ನೇತೃತ್ವ ದಲ್ಲಿ ಅವರ ನಾಯಕತ್ವ ವನ್ನು ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆ ಗೊಳ್ಳುತಿದ್ದೇನೆ ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಎಸ್ ನಾಯ್ಕ್ .
ತಾಲೂಕಾ ಪಂಚಯತ್ ನಿಕಟ ಪೂರ್ವ ಅಧ್ಯಕ್ಷ ಉಲ್ಲಾಸ್ ನಾಯ್ಕ್ ಕುದ್ರಿಗಿ ಪಂಚಾಯತ್ ಮಾಜಿ ಅಧ್ಯಕ್ಷ ಈಶ್ವರ ನಾಯ್ಕ ವಿನೋದ್ ನಾಯ್ಕ್ ಮಾವಿನ ಹೊಳೆ ಯೋಗೇಶ್ ರಾಯ್ಕರ್ ಪಂಚಾಯತ್ ಅಧ್ಯಕ್ಷೆ ಮಂಗಳಾ ನಾಯ್ಕ್ ಹಾಗೂ ಸದಸ್ಯರು ಮಾಂಕಾಳ ವೈದ್ಯರ ಅಭಿಮಾನಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top