ಶಾಸಕ ಸುನೀಲ್ ನಾಯ್ಕ ನೀಡಿದ ಭರವಸೆ ಹುಸಿಯಾಗಿದೆ: ನೊಂದ ಅಂಗವಾಡಿ ಕಾರ್ಯಕರ್ತರ ಕುಟುಂಬದಿಂದ ಆರೋಪ

ಬಡ ಕುಟುಂಬಕ್ಕೆ ಕೊಳ್ಳಿ ಇಟ್ಟರೆ ಶಾಸಕ ಸುನಿಲ್ ನಾಯ್ಕ

ಹೊನ್ನಾವರ: ತಾಲೂಕಿನ ಕಾಸರಕೋಡ ಗ್ರಾ.ಪಂ. ವ್ಯಾಪ್ತಿಯ ಅಂಬಿಗರಕೇರಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಶಾಸಕ ಸುನೀಲ್ ನಾಯ್ಕ ಅವರು ಅನುಕಂಪ ಆಧಾರಿತ ನೌಕರಿ ಕೊಡಿಸುವುದಾಗಿ ಭರವಸೆ ನೀಡಿ ಕೊನೆಗೂ ನಮಗೆ ನಿರಾಸೆ ಮೂಡಿಸಿದ್ದಾರೆ’ ಎಂದು ಶಶಿಕಲಾ ಗಣಪತಿ ಅಂಬಿಗ ಕಣ್ಣೀರು ಹಾಕಿದರು.

ಪಟ್ಟಣದ ಖಾಸಗಿ ಹೋಟೇಲ್‌ನಲ್ಲಿ ಈ ಕುರಿತು ಮೃತ ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ ಅಂಬಿಗ ಅವರ ಸಹೋದರಿ ಶಶಿಕಲಾ ಗಣಪತಿ ಅಂಬಿಗ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ನನ್ನ ಅಕ್ಕ ನೇತ್ರಾವತಿ ಅಂಬಿಗ ಅವರು ಅಂಬಿಗರಕೇರಿ ಅಂಗನವಾಡಿ ಕಾರ್ಯಕರ್ತೆ ಆಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2019 ರಲ್ಲಿ ನೇತ್ರಾವತಿ ಅಂಬಿಗ ಅವರು ಅಕಾಲಿಕ ನಿಧನ ಹೊಂದಿದ್ದರು. ಅವರ ನಿಧನದಿಂದಾಗಿ ಅವರ ಪುಟ್ಟ ಮಗ ತಬ್ಬಲಿಯಾಗಿದ್ದಾನೆ. ಆತನಿಗೂ ಹೃದಯ ಸಂಬಂಧಿ ಖಾಯಿಲೆಯಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನೇತ್ರಾವತಿ ಅವರ ಪತಿಗೂ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಇದಲ್ಲದೆ ನನ್ನ ತಂದೆ-ತಾಯಿ ಇಬ್ಬರೂ ದೋಣಿ ದುರಂತದಲ್ಲಿ ಮೃತಪಟ್ಟಿದ್ದಾರೆ. ಈತನ್ಮಧ್ಯೆ ನಾನು ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ತನ್ನ ಅಕ್ಕನ ಹುದ್ದೆಯನ್ನು ನನಗೆ ವಹಿಸಿಕೊಡಿ ಎಂದು ಶಾಸಕ ಸುನೀಲ್ ನಾಯ್ಕ ಅವರ ಬಳಿ ಹೇಳಿಕೊಂಡಿದ್ದೆವು. ಈ ಬಗ್ಗೆ ಹಲವಾರು ಬಾರಿ ಅವರಿದ್ದಲ್ಲಿಗೆ ಹೋಗಿ ಮನವಿ ಮಾಡಲಾಗಿತ್ತು.

ಇದಕ್ಕೆ ಪ್ರತಿಯಾಗಿ ಸುನೀಲ್ ನಾಯ್ಕ ಅವರು ನೀವು ಕಾಳಜಿ ಮಾಡಬೇಡಿ ಅನುಕಂಪದ ಆಧಾರದ ಮೇಲೆ ನಿಮ್ಮನ್ನೇ ನೇಮಿಸುತ್ತೇನೆ. ಅಕ್ಕನ ಸಾವಿಗೂ ನ್ಯಾಯ ಕೊಡಿಸಲಾಗುವುದು. 5 ಲಕ್ಷ ಪರಿಹಾರವನ್ನೂ ಕೊಡಲಾಗುವುದು ಎಂದಿದ್ದರು. ಸುಮಾರು 9 ತಿಂಗಳುಗಳ ಕಾಲ ಸುಮ್ಮನಿದ್ದು, ಇದೀಗ ಬೇರೊಬ್ಬರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಇದು ನಮಗಾದ ದೊಡ್ಡ ಅನ್ಯಾಯವಾಗಿದೆ ಎಂದು ಭಾವುಕರಾದರು.

ಇನ್ನು ಕಾಸರಕೋಡದ ಅಂಬಿಗರಕೇರಿಯಲ್ಲಿ ಖಾಲಿಯಿದ್ದ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಈಗಾಗಲೇ ಬೇರೊಬ್ಬರನ್ನು ನೇಮಕ ಮಾಡಲಾಗಿದೆ. ಗೌಡ್ರಕೇರಿಯಲ್ಲಿ ಸಧ್ಯ ಕಾರ್ಯಕರ್ತೆ ಹುದ್ದೆ ಖಾಲಿಯಿದ್ದು, ಆ ಜಾಗಕ್ಕಾದರೂ ಶಶಿಕಲಾ ಅಂಬಿಗ ಅವರನ್ನು ನೇಮಕ ಮಾಡಬೇಕು ಎಂದು ಮಾದೇವ ಅಂಬಿಗ, ರಾಜೇಶ ಅಂಬಿಗ, ವಿಶ್ವೇಶ್ವರ ಅಂಬಿಗ, ಗೋವಿಂದ ಅಂಬಿಗ, ಶ್ರೀಧರ ಅಂಬಿಗ, ನೇತ್ರಾವತಿ ಅಂಬಿಗ, ಶಾರದಾ ಅಂಬಿಗ ಅವರು ಆಗ್ರಹಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top