ತಾನೂ ರಾಷ್ಟ್ರೀಯವಾದಿ ಎಂದು ಮತ್ತೊಮ್ಮೆ ಸಾಭಿತು ಮಾಡಿದ ಹಿಂದೂ ಹೃದಯ ಸಾಮ್ರಾಟ ಸಂಸದ ಅನಂತ ಕುಮಾರ್ ಹೆಗಡೆ

ಭಟ್ಕಳ ಬಸ್ ನಿಲ್ದಾಣಕ್ಕೆ ಡಾಃ ಯು ಚಿತ್ತರಂಜನ್ ಹೆಸರಿಡಲು ಯಶಸ್ವಿಯಾದ ಅನಂತ ಕುಮಾರ್ .

ಭಟ್ಕಳ ರಿಕ್ಷಾ ಚಾಲಕರ ಗಣೇಶೋತ್ಸವ ಸಮಿತಿ ಸ್ಥಳ ಹಿಂದೂಗಳ ಮಡಿಲಿಗೆ ಹಾಕಿದ ಅನಂತ ಕುಮಾರ್ ಹೆಗಡೆ

ಭಟ್ಕಳ ತಾಲೂಕಿನ ಬಸ್ ನಿಲ್ದಾಣಕ್ಕೆ ಡಾ ಯು ಚಿತ್ತರಂಜನ್ ಹೆಸರನ್ನು ನಾಮಕರಣ ಮಾಡಲು ಹಾಗು ದಶಕಗಳ ಜ್ವಲಂತ ಸಮಸ್ಯೆಯಾದ ಭಟ್ಕಳದ ರಿಕ್ಷಾ ಚಾಲಕರ ಗಣೇಶೋತ್ಸವದ ಸ್ಥಳ ಹಿಂದೂಳಿಗೆ ಮಂಜುರು ಮಾಡಿಸುವ ಸಮಸ್ಯೆ ಮೊದಲಿಂದಲೂ ಕಾಡುತ್ತಿತ್ತು ಈ ಜ್ವಲಂತ ಸಮಸ್ಯೆಯನ್ನು ಕಟ್ಟರ್ ಹಿಂದು ಹಾಗು ರಾಷ್ಟಿಯವಾದಿ ಸಂಸದ ಅನಂತ ಕುಮಾರ್ ಹೆಗಡೆ ಪರಿಹರಿಸಿದ್ದು ಭಟ್ಕಳ ತಾಲೂಕಿನ  ಬಸ್ ನಿಲ್ದಾಣಕ್ಕೆ  ಡಾ ಯು ಚಿತ್ತರಂಜನ್ ಹೆಸರನ್ನು ನಾಮಕರಣ ಮಾಡಲು ಮತ್ತು ಭಟ್ಕಳದ ರಿಕ್ಷಾ ಚಾಲಕರ ಗಣೇಶೋತ್ಸವದ ಸ್ಥಳ ಹಿಂದೂಳಿಗೆ ಮಂಜುರು ಮಾಡಿಸಿ ತಾವೊಬ್ಬ ಹಿಂದೂವಾದಿ ಎಂದು ಸಾಭಿತು ಮಾಡಿದ್ದಾರೆ.

ಭಟ್ಕಳದ ರಿಕ್ಷಾ ಚಾಲಕರ ಗಣೇಶೋತ್ಸವದ ಸ್ಥಳ ಸಹಿತ ತಿಮ್ಮಪ್ಪ ನಾಯ್ಕ ಹತ್ಯಾ ಪ್ರಕರಣದ ವರದಿ ಬಹಿರಂಗ ಮತ್ತು ಭಟ್ಕಳದ ಎಲ್ಲಾ ನಾಗ ಬನಗಳ ಸ್ಥಳಗಳನ್ನು ಹಿಂದೂಗಳಿಗೆ ಮಂಜೂರಿ ಮಾಡಿಸಬೇಕೆಂದು ಭಟ್ಕಳದ ಮೂಲ ಬಿಜೆಪಿ ನಾಯಕರು ಮತ್ತು ಹಿಂದೂ ಸಂಘಟನೆಗಳ ನಾಯಕರು ಕಳೆದ ತಿಂಗಳು ವಿಶೇಷ ಸಮಿತಿಯ ಮೂಲಕ ಬಿಜೆಪಿಯ ರಾಜ್ಯ ನಾಯಕರನ್ನು ಬೇಟಿಯಾಗಿ ಭಟ್ಕಳದ ವಸ್ತು ಸ್ಥಿತಿಯನ್ನು ರಾಜ್ಯ ನಾಯಕರಿಗೆ ಮನದಟ್ಟು ಮಾಡಿ ಕೊಟ್ಟಿದ್ದರು.
ಇದರ ಪರಿಣಾಮ ಭಟ್ಕಳದ ನಾಗಬನ ಸಹಿತ ಭಟ್ಕಳಕ್ಕೆ ಸಂಬಂಧಿಸಿದ ಎಲ್ಲ ಪೈಲ್‌ಗಳನ್ನು ಕೊಡುವಂತೆ ಸರ್ಕಾರ ಭಟ್ಕಳ ಜನಪ್ರತಿನಿದಿಗೆ ತಾಕಿತು ಮಾಡಿತ್ತು

ಮೂಲ ಬಿಜೆಪಿಗರ ಮತ್ತು ಹಿಂದು ನಾಯಕರ ಬೇಡಿಕೆಯಾದ ಕರಿಬಂಟ ನಾಗ ಬನ, ಅರ್ಬನ್ ಬ್ಯಾಂಕ್ ಎದುರಿನ ನಾಗ ಬನ, ಮುರಿನಕಟ್ಟೆ,ರಿಕ್ಷಾ ಚಾಲಕರ ಗಣೇಶೋತ್ಸವದ ಜಾಗ ಮತ್ತು ನಾಗಬನ,ಬಿಜೆಪಿ ಅಧ್ಯಕ್ಷರಾಗಿದ್ದ ದಿ. ತಿಮ್ಮಪ್ಪ ನಾಯ್ಕರ ಕೊಲೆಯ ಮರುತನಿಖೆ. ಭಟ್ಕಳ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಶಾಸಕರಾಗಿದ್ದ ದಿ. ಡಾ. ಯು ಚಿತ್ತರಂಜನ್ ಹೆಸರಿಡಬೇಕು ಎನ್ನುವ ಆರು ಬೇಡಿಕೆಗಳನ್ನು ೨೩-೦೩-೨೦೨೩ ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಇಟ್ಟು ಈಡೇರಿಸುವ ಭರವಸೆಯನ್ನು ಮೂಲ ಬಿಜೆಪಿಗರಿಗೆ ಬಿಜೆಪಿ ವರಿಷ್ಟರು ನೀಡಿದ್ದರು.

ಆದರೆ ಸರಕಾರ ಕೇಳಿದ ಆರು ಪ್ರಕರಣದ ದಾಖಲೆಗಳಲ್ಲಿ ನಮ್ಮ ಭಟ್ಕಳ ಜನ ಪ್ರತಿನಿದಿಗಳು ಕೇವಲ ಎರಡು ಪ್ರಕರಣಗಳ ದಾಖಲೆಯನ್ನು ಒದಗಿಸಿದ್ದಾರೆ ಈ ಹಿನ್ನೆಲೆಯಲ್ಲಿ ಸರಕಾರ ಕೇವಲ ಎರಡು ಪ್ರಕರಣಗಳನ್ನು ಮಾತ್ರ ಮಂಜುರು ಮಾಡಿದೆ‌‌ ಎಂಬ ಮಾಹಿತಿ ಲಭ್ಯ ಇದೆ

ತರಾತುರಿಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ನಮ್ಮ ಈ ೬ ಬೇಡಿಕೆಯಲ್ಲಿ ರಿಕ್ಷಾ ಚಾಲಕರ ಗಣೇಶೋತ್ಸವ ಸ್ಥಳ ಮತ್ತು ಭಟ್ಕಳ ಬಸ್ ನಿಲ್ದಾಣಕ್ಕೆ ಡಾ.ಯು.ಚಿತ್ತರಂಜನ್ ಹೆಸರು ಈ ಎರಡು ಬೇಡಿಕೆಗಳಿಗೆ ಮಾತ್ರ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ದೊರೆತಿದೆ.
ಉಳಿದ ೪ ನಮ್ಮ ಬೇಡಿಕೆಗಳಿಗೆ ಸರ್ಕಾರದಿಂದ ಅನುಮೋದನೆ ದೊರೆತಿಲ್ಲಾ.

ಈ ೬ ಬೇಡಿಕೆಗಳಿಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಹಿಂದೂಗಳ ಜೊತೆ ಧ್ವನಿಗೆ ಪ್ರತಿಧ್ವನಿಯಾಗಿ ನಿಂತಿದ್ದು ತಮ್ಮ ಹೆಮ್ಮೆಯ ಸಂಸದರು ಹಾಗೂ ನಮ್ಮೆಲ್ಲರ ಹಿಂದೂ ವಾದಿ ಅನಂತಕುಮಾರ್ ಹೆಗಡೆಯವರು.
ನಮ್ಮ ಈ ೬ ಬೇಡಿಕೆಗಳಿಗೆ ಅನುಮೋದನೆ ನೀಡುವಂತೆ ಅನಂತಕುಮಾರ್ ಹೆಗಡೆಯವರು ರಾಜ್ಯ ಬಿಜೆಪಿ ಸರ್ಕಾರದ ಎದುರು ಪಟ್ಟು ಹಿಡಿದು ಕುಳಿತಿದ್ದರು.
ಆದರೆ ಸರ್ಕಾರ ಮಾತ್ರ ನಮ್ಮ ೨ ಬೇಡಿಕೆಗಳಿಗೆ ಮಾತ್ರ ಅನುಮೋದನೆ ನೀಡಿದೆ.
ಇನ್ನುಳಿದ ೪ ಪ್ರಕರಣಗಳ ಬಗ್ಗೆ ಜನ ಭಟ್ಕಳದ ಪ್ರತಿನಿದಿ ದಾಖಲೆ ಒದಗಿಸದ ಕಾರಣ ಸರಕಾರದ ಅನುಮೋದನೆ ದೊರೆತಿರುವುದಿಲ್ಲಾ ಜನ ಪ್ರತಿನಿದಿಗಳ ಈ ನಡೆ ತುಂಬ ಅನುಮಾನಗಳನ್ನು ಮೂಡಿಸಿದೆ ಮುಂದಿನ ದಿ‌ನದಲ್ಲಿ ಈ ಪ್ರಕರಣಕ್ಕೆ ಸಂಬಂದಿಸಿದ ಎಲ್ಲಾ ದಾಖಲೆ ಒದಗಿಸಿ ಎಲ್ಲಾ ಬೇಡಿಕೆಯನ್ನು ಸರಕಾರದ ಮೂಲಕ ಇಡೆರಿಸಿಕೊಳ್ಳಲಾಗುವುದು

ಕೇವಲ ರಾಜಕಿಯದ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಹಿಂದೂತ್ವ ಗುರಾಣಿ ಹಿಡಿದು ಮೂಲ ಬೆಜೆಪಿಗರನ್ನು ನಿಷ್ಟಾವಂತ ಹಿಂದೂ ಕಾರ್ಯಕರ್ತರನ್ನು ಮುಗಿಸುವ ಕೆಲವು ಅವಕಾಶವಾದಿ ಬಿಜೆಪಿ ಪಕ್ಷದ ರಾಜಕಾರಣಿಗಳು ಮತ್ತು ನಕಲಿ ಹಿಂದೂ ನಾಯಕರ ಮದ್ಯ ಭಾರತೀಯ ಭರವಸೆಯ ಸಂಸದ ರಾಷ್ಟ್ರೀಯವಾದಿ ಅನಂತ ಕುಮಾರ್ ಹೆಗಡೆ ಜಿ ಅವರು

ಈ ನಮ್ಮ ಮಹತ್ವದ ೬ ಬೇಡಿಕೆಗಳಲ್ಲಿ ನಮ್ಮ ೨ ಬೇಡಿಕೆಗಳು ಈಡೇರುವಲ್ಲಿ ಅತ್ಯಂತ ಮಹತ್ತರವಾದ ಪಾತ್ರ ನಿರ್ವಹಿಸಿ ಭಟ್ಕಳದ ಅಖಂಡ ಹಿಂದೂ ಸಮುದಾಯದ ಪರವಾಗಿ ತುಂಬು ಹೃದಯದ ಧನ್ಯವಾದಗಳು ಎಂದು ಹೇಳುತ್ತಿದ್ದಾರೆ ಭಟ್ಕಳದ ಹಿಂದೂ ಕಾರ್ಯಕರ್ತರು

ಒಟ್ಟಾರೆ ಸಂಸದ ಅನಂತ ಕುಮಾರ್ ಹೆಗಡೆ ಅವರು ತಾವು ಪ್ರಕರ ಹಿಂದೂವಾದಿ ಹಾಗು ರಾಷ್ಟ್ರೀಯವಾದಿ ಎನ್ನುವುದನ್ನು ತೊರಿಸಿಕೊಟ್ಟಿದ್ದಾರೆ

WhatsApp
Facebook
Telegram
error: Content is protected !!
Scroll to Top