ಭಟ್ಕಳದಲ್ಲಿ ಮುಸ್ಲಿಂ ಅಭ್ಯರ್ಥಿ ಬೆಂಬಲಿಸದಿರಲು ತಂಜೀಂ ನಿರ್ಣಯ

ಠುಸ್ ಪಟಾಕಿಯಾದ ಸುನೀಲ್ ನಾಯ್ಕ ರಾಜಕಿಯಲೆಕ್ಕಾಚಾರ

ಭಟ್ಕಳದ ತಾಲೂಕಿನ ಮುಸ್ಲಿಂ‌ ವಲಯದ ರಾಜಕೀಯ ಮತ್ತು ಸಾಮಾಜಿಕ ಪರಮೋಚ್ಚ ಸಂಸ್ಥೆಯಾದ ಮಜ್ಲಿಸೆ ಇಸ್ಲಾ-ವತಂಜೀಂ ಅವರ ರಾಜಕೀಯ ಸಮಿತಿಯ ಸಭೆಯಲ್ಲಿ ಈ ಬಾರಿಯ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದ ಮುಸ್ಲಿಂ ಅಭ್ಯರ್ಥಿಯನ್ನು ಬೆಂಬಲಿಸದಂತೆ ನಿರ್ಣಯ ಕೈಗೊಳ್ಳಲಾಗಿದ್ದು ಈ ನಿರ್ಣಯದಿಂದ ಹಾಲಿ ಶಾಸಕ ಸುನಿಲ್ ನಾಯ್ಕ ಅವರಿಗೆ ತೀವ್ರ ಹಿನ್ನಡೆಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಭಟ್ಕಳ: ತಂಜೀಂ ಸಂಸ್ಥೆಯು ತನ್ನದೇ ಆದ ರಾಜಕೀಯ ಸಂಘಟನೆಯನ್ನು ಹೂವಿದೆ. ಸಾಮಾಜಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಕಾಲ ಕಾಲಕ್ಕೆ ಚುನಾವಣಾ ಸಮಯದಲ್ಲಿ ತನ್ನದೇ ಆದ ನಿರ್ಣಯಗಳನ್ನು ತಗೆದುಕೊಂಡು ಅಭ್ಯರ್ಥಿಗಳನ್ನು ಬೆಂಬಲಿಸುತ್ತದೆ. 2023 ಚುನಾವಣೆ ಇನ್ನೇನು ಹತ್ತಿರ ಬರುತ್ತಿರುವಂತೆಯೇ ಭಟ್ಕಳ ಕ್ಷೇತ್ರದಲ್ಲಿ ರಾಜಕಿಯದ ತಪ್ಪು ಲೆಕ್ಕಚಾರ ಹಾಕಿದ ಕೆಲವು ವ್ಯಕ್ತಿಗಳು ಭಟ್ಕಳದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿದೆ ಇಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎಂದು ಬಿಜೆಪಿ ಶಾಸಕ ಸುನಿಲ್ ನಾಯ್ಕ ಅವರನ್ನು ಪರೋಕ್ಷವಾಗಿ ಬೆಂಬಲಿಸುವ ಕೆಲಸಕ್ಕಿಳಿದು ಕಾಂಗ್ರೇಸ್ ಅಭ್ಯರ್ಥಿ ಮಂಕಾಳ ವೈದ್ಯರನ್ನು ಹಣಿಯುವ ಪ್ರಯತ್ನ ನಡೆಸಲಾಗಿತ್ತು ಆದರೆ ತಂಜಿಮ್ ಸಂಸ್ಥೆ ರಾಜಕಿಯವಾಗಿ ಪರಿಪಕ್ವತೆಯನ್ನು ಹೊಂದಿರುವ ಸಂಸ್ಥೆಯಾಗಿ ಒಂದು ವೇಳೆ ತಾನು ಮುಸ್ಲಿಂ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದೆ ಆದಲ್ಲಿ ತಾನೂ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದಂತಾಗುತ್ತದೆ ಎಂಬ ಸಂಗತಿ ತಂಜಿಮಗೆ ಯಾರು ತಿಳಿ ಹೇಳಬೇಕಾದ ಅನಿವಾರ್ಯತೆ ಇಲ್ಲಾ . ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ, ನಾಮಧಾರಿ, ಮೊಗೇರ, ದೇವಡಿಗ, ಬ್ರಾಹ್ಮಣರು ಎಲ್ಲೆಲ್ಲಿ ಜಾಸ್ತಿ ಇರ್ತಾರೆ ರ ಅಲ್ಲಿ ಎಲ್ಲ ಕಡೆಗಳಲ್ಲಿ ಅವರನ್ನು ಅಭ್ಯರ್ಥಿಗಳನ್ನಾಗಿಸಬೇಕು. ಎನ್ನುವ ಫರ್ಮಾನು ಹೊರಡಿಸಿದರೆ, ಭಟ್ಕಳದಲ್ಲಿ ಮುಸ್ಲಿಂ ಬಿಟ್ಟು ಬೇರೆ ಅಭ್ಯರ್ಥಿ ಗೆಲ್ಲುತ್ತಲೇ ಇರಲಿಲ್ಲ. ಆದರೆ ಇಲ್ಲಿ 1980ರಿಂದಲೂ ಮುಸ್ಲಿಂ ಅಭ್ಯರ್ಥಿ ಗೆದ್ದಿದ್ದೇ ಇಲ್ಲ, ನಾಮಧಾರಿಗಳು ಕೂಡಾ ಭಟ್ಕಳದಲ್ಲಿ ಬಹುಸಂಖ್ಯಾತರಾಗಿದ್ದು, ಇಲ್ಲಿಯ ತನಕ ಯಾವೊಬ್ಬ ಅಭ್ಯರ್ಥಿಯೂ ಕೂಡಾ ನಾಮಧಾರಿ ಸಂಘಟನೆಯಿಂದ ನಿಂತು ಗೆಲ್ಲುವ ಸಾಹಸಕ್ಕೆ ಕೈಹಾಕಿಲ್ಲ. ಆದರೆ ಹಿಂದಿನ ಇತಿಹಾಸವನ್ನು ಕೆದುಕುತ್ತಾ ಹೋದರೆ ಜುಕಾಕೋ ಶಂಶುದ್ದೀನ್‌ ಹಾಗೂ ಎಸ್, ಎಂ.ಯಾ ಯಾ ಇವರುಗಳು ಹೆಚ್ಚು ಹಿಂದೂಗಳ ಮತಗಳನ್ನೇ ಪಡೆದು ಆಯ್ಕೆಯಾಗಿದ್ದರು. ಭಟ್ಕಳ ಕ್ಷೇತ್ರದಲ್ಲಿ ಇಲ್ಲಿನ ತನಕ ಮುಸ್ಲಿಂ, ಬ್ರಾಹ್ಮಣ, ನಾಮಧಾರಿ, ಮೊಗೇರ ಸೇರಿದಂತೆ ವಿವಿಧ ಜಾತಿ-ಜನಾಂಗದ ಜನರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮಂತ್ರಿಗಳೂ ಆಗಿದ್ದಾರೆ.

ಕಳೆದಬಾರಿ ಕಾಂಗ್ರೆಸ್‌ ನಿಂದ ಪಕ್ಷಾಂತರಗೊಂಡು ಬಿ.ಜೆ.ಪಿಯಲ್ಲಿ ಚುನಾವಣೆಗೆ ನಿಂತರೂ ಕೂಡಾ ಪರೇಸ್ ಮೆಸ್ತಾ ಹಾಗೂ ಮಾಗೋಡ ಪಕರಣದಿಂದ ಮತ್ತು ಅನಂತಕುಮಾರ್ ಹೆಗಡೆ, ಅವರ ನಿರಂತರ ಪ್ರಚಾರದಿಂದ ಕೇವಲ ಕೆಲವೇ ಕೆಲವು ಮತಗಳಿಂದ ಮಂಕಾಳ ವೈದ್ಯರನ್ನು ಸೋಲಿಸಿದ್ದ ಸುನೀಲ್ ನಾಯ್ಡುಗೆ ಈಗ ಕ್ಷೇತ್ರದಲ್ಲಿ ಸೋಲಿನ ಭಯ ಆರಂಭವಾಗಿದೆ. ಮಂಕಾಳ ವೈದ್ಯ ಅವರು ಚುನಾವಣಾ ಅಖಾಡಕ್ಕೆ ಧುಮುಕುತ್ತಲೇ ಒಂದಿಲ್ಲೊಂದು ಸುಳ್ಳುಗಳನ್ನು ಹರಿಬಿಡುತ್ತಿರುವ ಸುನೀಲ್ ನಾಯ್ಕ ಅವರ ವಿರುದ್ಧ ಅಪಪ್ರಚಾರ ಮಾಡಲು ಹೋಗಿ ತಾವೇ ಪೇಚಿಗೆ ಸಿಲುಕುವ ಪ್ರಸಂಗ ಕೂಡ ಎದುರಾಯಿತು. ಒಂದು ಕಾಲದಲ್ಲಿ ಕಟ್ಟಾ ಹಿಂದುವಾದಿ, ಬಿ.ಜೆ.ಪಿಯ ಪ್ರಮುಖ ಹುದ್ದೆಯಲ್ಲಿದ್ದ ಶಂಕರ ನಾಯ್ಕ, ಅವರೇ ಈ ಸುನೀಲ್ ನಾಯ್ಕ ಅವರನ್ನು ವಯಕ್ತಿಕವಾಗಿ ಹೀಗಳೆದಿದ್ದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದು. ಮತದಾರರ ಮೇಲೆ ತೀವ್ರ ಪರಿಣಾಮ ಬೀರಿದಂತೂ ಸತ್ಯ.

ಇನ್ನೇನು ಚುನಾವಣೆ ಹತ್ತಿರ ಬರುತ್ತದೆ ಎನ್ನುವಾಗಲೇ ಸುನೀಲ್ ನಾಯ್ಕ ತಂಜಿಮ್ ಅಧ್ಯಕ್ಷ ಇನಾತವುಲ್ಲಾ ಶಾಬಂದ್ರಿ ಅವರನ್ನು ಹತ್ತಿರಕ್ಕೆ ಸೇರಿಸಿಕೊಂಡಿದ್ದರು. ಈಗಾಗಲೇ ಪುರಸಭೆಯ ನಮಫಲಕದ ಗೊಂದಲ, ಆಸರಕೇಯ ಮಹಾದ್ದಾರದ ಗೊಂದಲ, ಟಿಪ್ಪು: ದ್ವಾರ ಇತ್ಯಾದಿಗಳಿಂದ ಮುಸ್ಲಿಂ ಸಂಘಟನೆಯ ತೀವ್ರ ವಿರೋಧ ಕಟ್ಟಿಕೊಂಡಿದ್ದರೂ ತಜಿಂ ಅಧ್ಯಕ್ಷರಾಗಿದ್ದ ಇನಾಯತ್‌ ವುಲ್ಲಾ, ಶಾಬಂದ್ರಿ ಅವರು, ಶಾಸಕ ಸುನಿಲ್ ನಾಯ್ಕ ಅವರಿಗೆ ಹೆಚ್ಚು ಆಪ್ತರಾಗಿದ್ದನ್ನು ಕಂಡ ಅನೇಕ ಸ್ಪೋರ್ಟ್ಸ್ ಕ್ಲಬ್ ಗಳು ಇದೊಂದು ಅನೈತಿಕ ವ್ಯವಹಾರ ಎನ್ನುವುದನ್ನು ಕಂಡು ಕೊಂಡಿದ್ದು, ತಕ್ಷಣ ಸಂಬಂಧಪಟ್ಟ ಮುಸ್ಲಿಂ ಮುಖಂಡರಿಗೆ ವಿಷಯ ಮುಟ್ಟಿದ್ದರಿಂದ ಎಲ್ಲರ ಜಾಗೃತವಾಗಿ ಯಾವುದೇ ಕಾರಣಕ್ಕೂ ಇನಾಯತ್‌ವುಲ್ಲಾ ಚುನಾವಣೆಗೆ ನಿಲ್ಲಬಾರದು ಎಂದು ನಿರ್ಧರಿಸಿದ್ದರ ಫಲವೇ ಇಂದು ಚುನಾವಣೆ ಸಮಿತಿಯ ಸಭೆಯಲ್ಲಿ ಇಂತಹ ನಿರ್ಣಯ ಹೊರಕ್ಕೆ ಬರಲು ಕಾರಣವಾಯಿತು. ಒಂದು ಮೂಲಗಳ ಪ್ರಕಾರ ಇನಾಯತುಲ್ಲಾ ಚುನಾವಣೆಗೆ ನಿಂತರ ಅವರ ಖರ್ಚು ವೆಚ್ಚಗಳನ್ನು ವಯಕ್ತಿಕವಾಗಿ ತಾನೇ ಬರಿಸುವುದಾಗಿಯೂ ಸುನಿಲ್ ನಾಯ್ಕ ಭರವಸೆ ನೀಡಿದ್ದರು ಎಂದು ಸ್ಪೋರ್ಟ್ಸ್ ಕ್ಲಬ್ ಗಳ ಸದಸ್ಯರೇ ಹೇಳುತ್ತಿದ್ದಾರೆ ಎನ್ನಲಾಗಿದೆ, ಇದೊಂದು ವದಂತಿಯಾಗಿದೆ ಆದರೆ ಬೆಂಕಿ ಇಲ್ಲದೆ ಹೊಗೆ ಬರಲಾರದು ಎನ್ನುವುದು ಅಷ್ಟೆ ಕಟು ಸತ್ಯ

ಸುನೀಲ್‌ ನಾಯ್ಕ ತಮ್ಮ ರಾಜಕೀಯ ಆಟವನ್ನು ಇನಾಯತುಲ್ಲಾ ಶಾಬಂದ್ರಿ ಮೂಲಕ ಆಡಲು ಹೋಗಿದ್ದು ಎಲ್ಲವೂ ತಲೆಕೆಳಗಾಗಿದೆ. ಮುಸ್ಲಿಂ ಅಭ್ಯರ್ಥಿಯನ್ನು ನಿಲ್ಲಿಸಿ. ತಂಜಿಮ್ ಬೆಂಬಲಿಸುವ ನಿರ್ಣಯ ಕೈಗೊಂಡರೆ ಮುಸ್ಲಿ ಅಭ್ಯರ್ಥಿಗಳ ಮತಗಳು ಬೇರೆ ಅಭ್ಯರ್ಥಿಗೆ ಹೋಗದೇ ಇದ್ದರೆ ಕಾಂಗ್ರೆಸ್ನಿಂದ ಚುನಾವಣೆಗೆ ನಿಲ್ಲುವ ಮಂಕಾಳ ವೈದ್ಯ ಅವರು ಅಲ್ಪ ಮತಕ್ಕೆ ಕುಸಿಯುತ್ತಾರೆ. ಆಗ ಬಿಜೆಪಿಯಲ್ಲಿಯೇ ತನ್ನ ಬಗ್ಗೆ ಅಸಮಾದಾನ ಇದ್ದರೂ ಸಹ ಬರುವ ಮತಗಳೇ ತನ್ನ ಗೆಲುವಿಗೆ ಸಾಕಾಗಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದ ಸುನಿಲ್ ನಾಯ್ಕ ಅವರ ಮತದ ಬುಟ್ಟಿ ಖಾಲಿಯಾಗಿದೆ, ಮುಸ್ಲಿಂ ಮತಗಳು ಒಂದೇ ಕಡೆಗೆ ಹೋಗದೇ ಇದ್ದರೆ ಈ ಬಾರಿ ಸುನೀಲ್ ನಾಯ್ಕ ಗೆಲುವು ಅಸಾಧ್ಯ ಎನ್ನುವುದು ಸ್ವತಹ ಅವರಿಗೇ ಗೊತ್ತಿದೆ. ಮತ್ತೆ ಸುನೀಲ್ ನಾಯ್ಕ ಅವರು ಪಕ್ಷದ ಹಿರಿಯರನ್ನು, ಉತ್ತಮ ಕಾರ್ಯಕರ್ತರನ್ನು ದೂರ ಮಾಡಿಕೊಂಡಿದ್ದು ಸ್ವತಹ ಅನಂತಕುಮಾರ್ ಹೆಗಡೆ ಅವರಿಗೂ ತೀವ್ರ ಬೇಸರ ತಂದಿದೆ. ಅವರು ಭಟ್ಕಳ ಕ್ಷೇತ್ರಕ್ಕೆ ತಾನು ಪ್ರಚಾರಕ್ಕೆ ಬರುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಎನ್ನಲಾಗಿದೆ. ಇದರಿಂದ ಅಲ್ಪ ಸ್ವಲ್ಪ ಆಶಾ ಭಾವನೆಯೂ ಕೂಡಾ ಉಡುಗಿ ಹೋಗಿದ್ದು ಇನ್ನು ಬೇರೊಂದು ಮಾರ್ಗವನ್ನು ಹುಡುಕಬೇಕಾದ ಎದುರಾಗಿದೆ. ಭಟ್ಕಳದಲ್ಲಿ ಎಸ್‌ಡಿಪಿಐ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕಿಸಿದರೂ ತಂಜಿಮ್ ಬೆಂಬಲ ಕೊಡುವುದು ಸಾಧ್ಯವೇ ಇಲ್ಲವಾದ್ದರಿಂದ ಮುಸ್ಲಿಂ ಮತ ಹಂಚಿ ಹೋಗುವ ಪ್ರಸಂಗ ಬರುವುದಿಲ್ಲ. ಒಟ್ಟಾರೆಯಾಗಿ ತಂಜೀರಿ ಅಧ್ಯಕ್ಷರನ್ನೇ ಆಸೆ-ಆಕಾಂಕ್ಷೆಗಳಿಗೆ ಬಲಿಯಾಗುವಂತೆ ಮಾಡುತ್ತೆನೆ ಎಂದುಕೊಂಡಿದ್ದ ಸುನೀಲ್ ನಾಯ್ಕ ಅವರ ಪಟಾಕಿ ಟುಸ್ ಆಗಿದೆ. ಇನ್ಯಾವ ಹೊಸ ಪಟಾಕಿಯ ಅನ್ವೇಷಣೆ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ,

WhatsApp
Facebook
Telegram
error: Content is protected !!
Scroll to Top