ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಚುನಾವಣಾ ಜಾಗ್ರತಿ

ಪತ್ರಕರ್ತರು ಸಾಮಾಜಿಕ ಕಾರ್ಯಕರ್ತನ್ನೊಳಗೊಂಡಂತೆ ವಿಡಿಯೋ ಕಾನ್ಪರೆನ್ಸ

ಕಾರವಾರ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ಸಾಮಾಜಿಕ ಕಾರ್ಯಕರ್ತರು ಪತ್ರಕರ್ತರು ಗಣ್ಯರನ್ನೊಳಗೊಂಡಂತೆ ವಿಡಿಯೋ ಕಾನ್ಪರೆನ್ಸ ಮೂಲಕ ಮುಂಬರುವ ಚುನಾವಣಾ ಜಾಗ್ರತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು

ಸಭೆಯಲ್ಲಿ ಜಿಲ್ಲಾಧಿಕಾರಿ ಅವರು ಚುನಾವಣೆ ಭದ್ರತೆ ನೀತಿ ಸಂಹಿತೆ ಬಗ್ಗೆ ಆ ಸಮಯದಲ್ಲಿ ತೆಗೆದುಕೊಳ್ಳುವ ಕ್ರಮದ ಬಗ್ಗೆ ವಿವರಣೆಯನ್ನು ನಿಡಿದರು. ಅವರು ಮಾತನಾಡುತ್ತ ಈ ಭಾರಿಯ ಚುನಾವಣೆಯಲ್ಲಿ ಯುವ ಮತದಾರರನ್ನು ಗಮನದಲ್ಲಿಟ್ಟು ಯುವ ಮತದಾನದ ಬಗ್ಗೆ ಹೆಚ್ಚು ಒತ್ತು ನಿಡಲಾಗುತ್ತದೆ, ಹಾಗು ಚುನಾವಣಾ ನೀತಿ ಸಂಹಿತೆಯ ಸಂದರ್ಬದಲ್ಲಿ ಭದ್ರತೆಯ ದ್ರಷ್ಟಿಯಿಂದ ಹೆಚ್ಚುವರಿ ಚೆಕ್ ಪೊಷ್ಟಗಳನ್ನು ಹಾಕಲಾಗುತ್ತದೆ ಜಿಲ್ಲೆಯಲ್ಲಿರು ರೌಡಿ ಶೀಟರ್ ಬಗ್ಗೆ ಪತ್ರಕರ್ತ ವರ್ಗದವರು ಕೇಳಿದಾಗ ಜಿಲ್ಲಾ ಎಸ್ ಪಿ ಮಾತನಾಡಿ ಜಿಲ್ಲೆಯಲ್ಲಿ 1115 ರೌಡಿ ಶಿಟರ್ಗಳಿದ್ದು ಇವರ ಬಗ್ಗೆ ನಿಗಾ ವಹಿಸಲಾಗುವುದು ಎಂದು ಹೇಳಿದರು. ಇನ್ನು ಚುನಾವಣಾ ಸಂದರ್ಬದಲ್ಲಿ ನಡೆಯುವ ಅಭ್ಯರ್ಥಿಗಳ ಪ್ರಚಾರದ ಬಗ್ಗೆ ಚರ್ಚಿಸಲಾಯಿತು paid News ಬಗ್ಗೆ ಮಾತನಾಡುತ್ತ ಅಂಚೆ ಮತದಾನಸ ಬಗ್ಗೆ ಮಾತನಾಡುತ್ತ 80 ವರ್ಷಕ್ಕೆ ಮೆಲ್ಪಟ್ಟ ಮತದಾರರು ಇಚ್ಚೆ ಪಟ್ಟಲ್ಲಿ ಅವಂತವರಿಗೆ ಅಂಚೆ ಮತದಾನದ ವ್ಯವಸ್ಥೆ ಮಾಡಿಕೊಡಲಾಗುವುದು ದೈಹಿಕವಾಗಿ ಸಬಲಾಗಿರುವ ವಯಸ್ಕರು ಮತಗಟ್ಟೆಗೆ ಬಂದು ಮತದಾನ ಮಾಡುವಂತಾಗ ಬೇಕು ಚುನಾವಣಾ ಆಯೋಗ ಹೇಳುತ್ತದೆ ಎಂದು ಹೇಳಿದರು

ಕರ್ನಾಟಕದ ಮದ್ಯದ ದರಕ್ಕಿಂತ ಗೋವಾ ರಾಜ್ಯದಲ್ಲಿ ಮದ್ಯದ ದರ ಅಗ್ಗವಾಗಿದೆ. ಈ ಕಾರಣದಿಂದ ಮದ್ಯ ಮಾರಾಟಗಾರರು ಗೋವಾದಿಂದ ಕರ್ನಾಟಕಕ್ಕೆ ಮದ್ಯವನ್ನು ಸಾಗಾಟ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ಗಡಿಯಲ್ಲಿ ತೀವ್ರ ನಿಗಾ ವಹಿಸುವಂತೆ ಸೂಚಿಸಿದರು. ಈಗಾಗಲೇ ಕಾರವಾರ ತಾಲೂಕಿನ ಮಾಜಾಳಿ ಚೆಕ್‌ಪೋಸ್ಟ್ ಮತ್ತು ಜೋಯಿಡಾ ತಾಲೂಕಿನ ಅನ್‌ಮೋಡ್ ಚೆಕ್‌ಪೋಸ್ಟ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಇನ್ನೂ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಎನ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ-1 ಜಯಲಕ್ಷ್ಮಮ್ಮ, ಅಬಕಾರಿ ನಿರೀಕ್ಷಕರು ಜಗದೀಶ್ ಕುಲಕರ್ಣಿ ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top