ಸಿದ್ದಾಪುರ ಕೋಲ್ ಸಿರ್ಸಿಯಲ್ಲಿ 20 ಲಕ್ಷ ಅನುದಾನದಲ್ಲಿ ಕಳಪೆ ಡಾಂಬರಿಕರಣ : ಸ್ಥಳಿಯರ ಆಕ್ರೋಶ

20 ಲಕ್ಷ ಅನುಧಾನವನ್ನು ನುಂಗಿ ನೀರು ಕುಡಿದವರಾದರು ಯಾರು

ಸಿದ್ದಾಪುರ:- ಕೋಲ್ ಸಿರ್ಸಿ ಮಾರುತಿ ನಗರ ರಸ್ತೆ 20 ಲಕ್ಷ ಅನುದಾದಲ್ಲಿ ಡಾಂಬರೀಕರಣ ಮಾಡಲಾಗಿದ್ದು ಕಾಮಗಾರಿ ಕಳೆಪೆಯಾಗಿರುವ ಬಗ್ಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.


ಈ ರಸ್ತೆಯು 600 ಮೀಟರ್ ರಸ್ತೆ ಡಾಂಬರೀಕರಣ ಮಾಡಿದ್ದು ಸರಿಯಾಗಿ ಕೆಲಸ ಆಗದೆ ಕೆಲವೇ ದಿನಗಳಲ್ಲಿ ಅಲ್ಲಲ್ಲಿ ರಸ್ತೆ ಕಿತ್ತು ಬರುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕೋಲ್ ಸಿರ್ಸಿಯ ಮಾರುತಿ ನಗರ , ಕಾನಳ್ಳಿ , ಕಡಕೇರಿ, ತ್ಯಾರ್ಸಿ, ಮೂಲಕ ಕುಮಟಾ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಹಲವಾರು ವರ್ಷಗಳಿಂದ ಈ ರಸ್ತೆಯನ್ನು ಸರ್ವಋುತು ರಸ್ತೆಯನ್ನಾಗಿಸಬೇಕೆಂಬ ಬೇಡಿಕೆ ಇತ್ತು. ಆದರೆ ರಸ್ತೆ ಕಾಮಗಾರಿ ಕಳಪೆಯಾಗಿರುವುದರಿಂದ ಮೂರ್ನಾಲ್ಕು ದಿನದಲ್ಲಿ ಕೀಳುತ್ತಿದೆ. ಬಿಡುಗಡೆಯಾದ ಇಪ್ಪತ್ತು ಲಕ್ಷ ಪೂರ್ತಿ ದುರ್ಬಳಕೆಯಾಗಿದೆ ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಡಾಂಬರ್ ಮಿಕ್ಸ್ ಮಾಡದೇ ಕೇವಲ ಅರ್ದ ಇಂಚಿಕ್ಕಿಂತ ಕಡಿಮೆ ಡಾಂಬರ್ ಹಾಕಿರುವುದರಿಂದ ರಸ್ತೆ ಕಳಪೆಯಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಸಮರ್ಪಕವಾದ ಕೆಲಸವಾಗದೆ ರಸ್ತೆ ಹಪ್ಪಳದಂತಾಗಿದೆ‌. ತೀರ ಕಳಪೆ ಗುಣಮಟ್ಟದ ಕೆಲಸ ನಡೆದಿದೆ. ಇದರಿಂದ ಬೆಸತ್ತಿರುವ ಸ್ಥಳೀಯರು ಮಾಧ್ಯಮದೊಂದಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪಂಚಾಯತ್ ಅನುದಾನದಲ್ಲಿ ನಿರ್ಮಾಣವಾಗಿರುವ ರಸ್ತೆಯಾಗಿದ್ದು ಸಂಬಂಧಪಟ್ಟ ಇಲಾಖೆಯವರು ಗುತ್ತಿಗೆದಾರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ರಸ್ತೆ ಯನ್ನು ಸರ್ವ ಋತು ರಸ್ತೆ ನಿರ್ಮಾಣ ಮಾಡಿಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಒಟ್ಟಾರೆ ದೇಶದ ಅಭಿವೃದ್ದಿಯ ಬಗ್ಗೆ ದಿನ ಬೆಳಗಾದರೆ ಮಾತುಕತೆ ನಡೆಸುತ್ತಿದ್ದರೆ ಕೆಲವೋಂದು ಪಟ್ಟಬದ್ರ ಹಿತಾಸಕ್ತಿಗಳು ತಮ್ಮ ಜೇಬನ್ನು ಬೆಚ್ಚಗೆ ಮಾಡಿಕೊಳ್ಳುವ ಕಾಯಕದಲ್ಲಿ ನಿರತರಾಗಿದ್ದಾರೆ ಈ ಬಗ್ಗೆ ಜನಪ್ರತಿನಿದಿಗಳು ಕೂಡಲೆ ಸೂಕ್ತ ಕ್ರಮಕ್ಕೆ ಕೈಗೊಳ್ಳಬೇಕಾಗಿದೆ ಇಲ್ಲವಾದಲ್ಲಿ ಈ ಕಳಪೆ ಕಾಮಗಾರಿಯಲ್ಲಿ ತಮ್ಮ ಪಾಲೆಷ್ಟು ಎಂಬುವುದನ್ನು ಸಾರ್ವಜನಿಕರು ಕುಡುಕುವ ಪ್ರಯ್ನಕ್ಕೆ ಕೈಹಾಕುತ್ತಾರೆ ಎಂದು ಸ್ಥಳಿಯರು ಆಕ್ರೋಶವನ್ನು ವ್ಯಕ್ತಪಡಿಸುತ್ರಿದ್ದಾರೆ.

WhatsApp
Facebook
Telegram
error: Content is protected !!
Scroll to Top