ಮಮ್ಮಿ ಎಂದರೆ ಸಮಾಧಿ.. ಅಮ್ಮ ಎಂದರೆ ಚೆಂದ..! ವಾಗ್ಮಿ ಹಿರೇಮಗಳೂರು ಕಣ್ಣನ್‌ ಬಣ್ಣನೆ.

ನಾನು ವೇದಿಕೆಗೆ ಬರುವ ಮುನ್ನ ಮಳೆ ಬರುವ ಸೂಚನೆ ಇತ್ತು. ಆದರೆ, ಚಕ್ರವರ್ತಿ ಸೂಲಿಬೆಲೆ ವೇದಿಕೆಗೆ ಬರುತ್ತಿದ್ದಂತೆಯೇ ಅವರ ಮಾತಿಗೆ ಹೆದರಿ ಮಳೆ ಬರದೆ ಹೋಯ್ತು. ಹಿಜಾಬೇ ಹೋಗಿರುವಾಗ, ಇನ್ನು ಮಳೆ ಹೋಗದೆ ಇರುತ್ತದೆಯೇ..? ಎಂದು ಹಿರೇಮಗಳೂರು ಕಣ್ಣನ್‌ ಸೂಚ್ಯವಾಗಿ ತಿವಿದರು. ಕೆಲವೊಮ್ಮೆ ಮಾತನಾಡಬೇಕಾಗುತ್ತದೆ. ಮಾತನಾಡಲು ಭಯಪಡಬಾರದು. ಇನ್ಮುಂದೆ ಶಾಲೆಗೆ ಹಿಜಾಬ್‌ ಮುಚ್ಕೊಂಡು ಹೋಗಬಾರದು ಎಂದರು. ಅಡ್ಡಂಡ ಕಾರ್ಯಪ್ಪ ಅವರು ಲೆಫ್ಟಿಸ್ಟೋ, ರೈಟಿಸ್ಟೋ ಎಂದು ಸಭಿಕರನ್ನು ಕೇಳಿದ ಕಣ್ಣನ್‌, ಅವರೊಬ್ಬ ಸ್ಪ್ರೇಟ್‌ ಹಿಟ್ಸ್‌ ಎಂದು ಹೇಳಿದರು.

ಮೈಸೂರು : ಪೋಷಕರು ತಮ್ಮ ಮಕ್ಕಳಿಗೆ ಮಮ್ಮಿ, ಡ್ಯಾಡಿ ಎಂದು ಹೇಳಿಕೊಡುವ ಬದಲು ಅಪ್ಪ – ಅಮ್ಮ  ಎಂದು ಕಲಿಸಿಕೊಡಬೇಕೆಂದು ಕನ್ನಡ ಅರ್ಚಕ, ವಾಗ್ಮಿ ಹಿರೇಮಗಳೂರು ಕಣ್ಣನ್‌ ಕಿವಿ ಮಾತು ಹೇಳಿದರು.

ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಅಂಗವಾಗಿ ಮೈಸೂರಿನ ವನರಂಗದಲ್ಲಿ ‘ಕನ್ನಡ ಕಾವ್ಯದಲ್ಲಿ ತಾಯಿ’ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ‘ನಮ್ಮದು ಡೋಂಟ್‌ ಕೇರ್‌ ಸಂಸ್ಕೃತಿ ಅಲ್ಲ, ಟೇಕ್‌ ಕೇರ್‌ ಸಂಸ್ಕೃತಿ. ಹತ್ತು ದೇವರನ್ನು ಪೂಜಿಸುವ ಮುನ್ನ ಹೆತ್ತ ತಾಯಿಯನ್ನು ಪೋಷಿಸಿ, ಪೂಜಿಸಿ. ಮಮ್ಮಿ ಎಂದರೆ ‘ಸಮಾಧಿ’, ಅಮ್ಮ ಎನ್ನುವುದೇ ಚೆಂದ. ಪದ ಬಳಕೆ ಬಗ್ಗೆ ಪೋಷಕರು ತಿಳಿ ಹೇಳಿಕೊಡಬೇಕು. ತಾಯಿ ಹತ್ತಿರ ಶಿಕ್ಷಣ ಕಲಿತ ಮಗ ಜೀವನ ಕಲೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುತ್ತಾನೆ. ತಾಯಿ ಎಂಬ ಮೂರ್ತ ರೂಪಕ್ಕಿರುವ ಶಕ್ತಿ ಅಂಥದ್ದು. ತಾಯಿ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಮಹಿಳೆಯರಿಗೆ ಗೌರವಿಸುವುದು ನಮ್ಮ ಸಂಸ್ಕೃತಿ’ ಎಂದರು.


ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಉಪ ನಿರ್ದೇಶಕಿ ನಿರ್ಮಲ ಮಠಪತಿ ಸೇರಿದಂತೆ ಇತರರು ಇದ್ದರು.

ಮಳೆಯಂತೆ ಹಿಜಾಬ್‌ ಹೋಯ್ತು..!

ನಾನು ವೇದಿಕೆಗೆ ಬರುವ ಮುನ್ನ ಮಳೆ ಬರುವ ಸೂಚನೆ ಇತ್ತು. ಆದರೆ, ಚಕ್ರವರ್ತಿ ಸೂಲಿಬೆಲೆ ವೇದಿಕೆಗೆ ಬರುತ್ತಿದ್ದಂತೆಯೇ ಅವರ ಮಾತಿಗೆ ಹೆದರಿ ಮಳೆ ಬರದೆ ಹೋಯ್ತು. ಹಿಜಾಬೇ ಹೋಗಿರುವಾಗ, ಇನ್ನು ಮಳೆ ಹೋಗದೆ ಇರುತ್ತದೆಯೇ..? ಎಂದು ಹಿರೇಮಗಳೂರು ಕಣ್ಣನ್‌ ಸೂಚ್ಯವಾಗಿ ತಿವಿದರು. ಕೆಲವೊಮ್ಮೆ ಮಾತನಾಡಬೇಕಾಗುತ್ತದೆ. ಮಾತನಾಡಲು ಭಯಪಡಬಾರದು. ಇನ್ಮುಂದೆ ಶಾಲೆಗೆ ಹಿಜಾಬ್‌ ಮುಚ್ಕೊಂಡು ಹೋಗಬಾರದು ಎಂದರು. ಅಡ್ಡಂಡ ಕಾರ್ಯಪ್ಪ ಅವರು ಲೆಫ್ಟಿಸ್ಟೋ, ರೈಟಿಸ್ಟೋ ಎಂದು ಸಭಿಕರನ್ನು ಕೇಳಿದ ಕಣ್ಣನ್‌, ಅವರೊಬ್ಬ ಸ್ಪ್ರೇಟ್‌ ಹಿಟ್ಸ್‌ ಎಂದು ಹೇಳಿದರು.

ಮತ್ತೆ ಮುಖ್ಯಮಂತ್ರಿ’ ರಶ್‌…

ಕಳೆದ 4 ದಶಕಗಳಿಂದ ಮುಖ್ಯಮಂತ್ರಿಯಾಗಿ ರಂಗದ ಮೇಲೆ ಕಾಣಿಸಿಕೊಳ್ಳುತ್ತಿದ್ದ ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಅವರು, ‘ಮತ್ತೆ ಮುಖ್ಯಮಂತ್ರಿ’ ಎಂಬ ಹೊಸ ಪ್ರಯೋಗದ ಮೂಲಕ ವಿಭಿನ್ನ ರೀತಿಯಲ್ಲಿ ಭಾನುವಾರ ಕಲಾಮಂದಿರದಲ್ಲಿ ಮಿಂಚಿದರು. ಹೊಸ ಬಗೆಯ ‘ಮತ್ತೆ ಮುಖ್ಯಮಂತ್ರಿ’ಯನ್ನು ನೋಡಲು ಜನಸ್ತೋಮವೇ ನೆರೆದಿತ್ತು. ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಕೊನೆ ದಿನ ಪ್ರದರ್ಶನಗೊಂಡ ಈ ನಾಟಕವನ್ನು ಡಾ. ಕೆ. ವೈ. ನಾರಾಯಣಸ್ವಾಮಿ ರಚಿಸಿದ್ದಾರೆ. ಹಿರಿಯ ರಂಗಕರ್ಮಿ, ರಂಗಾಯಣದ ಮಾಜಿ ನಿರ್ದೇಶಕ ಡಾ. ಬಿ. ವಿ. ರಾಜಾರಾಂ ನಿರ್ದೇಶಿಸಿದ್ದಾರೆ.

‘ಮುಖ್ಯಮಂತ್ರಿ’ ನಾಟಕದ ಮೂಲಕ ರಾಜ್ಯದ ಮನೆ ಮಾತಾಗಿದ್ದ ಮುಖ್ಯಮಂತ್ರಿ ಚಂದ್ರು ಅವರು ಕಳೆದ 40 ವರ್ಷಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ‘ಮುಖ್ಯಮಂತ್ರಿ’ ಪಾತ್ರದಲ್ಲಿ 700ಕ್ಕೂ ಪ್ರದರ್ಶನ ನೀಡಿದ್ದರು. ಆದರೆ, ಬದಲಾದ ರಾಜಕೀಯ ವ್ಯವಸ್ಥೆ ಮತ್ತು ಕಾಲಘಟ್ಟದಲ್ಲಿ ಪ್ರಸ್ತುತ ಎಂತಹ ಮುಖ್ಯಮಂತ್ರಿ ಜನರಿಗೆ ಬೇಕು ಎಂಬುದನ್ನು ತಿಳಿಸುವ ಸಲುವಾಗಿ ‘ಮತ್ತೆ ಮುಖ್ಯಮಂತ್ರಿ’ ಎಂಬ ಹೊಸ ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಬಣ್ಣ ಹಚ್ಚಿ ಗಮನ ಸೆಳೆದರು. ಇದೊಂದು ರಾಜಕೀಯ ಆತ್ಮಾವಲೋಕನದ ನಾಟಕವಾಗಿದ್ದು, ದೇಶದಲ್ಲಿ ಕಳೆದ 75 ವರ್ಷಗಳಿಂದ ನಡೆದು ಬರುತ್ತಿರುವ ರಾಜಕೀಯ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ನಡೆಸಿರುವ ಪ್ರಯತ್ನವಾಗಿತ್ತು. ಉಳಿದಂತೆ ಕನ್ನಡದ ಕಾಮರೂಪಿಗಳ್‌, ಇಂಗ್ಲಿಷ್‌ನ ದಿ ಸ್ಕ್ವೇರ್ ರೂಟ್‌ ಆಫ್‌ ಎ ಸಾನೆಟ್‌ ನಾಟಕಕ್ಕೂ ಹೆಚ್ಚಿನ ರಂಗಾಸಕ್ತರು ಸೇರಿದ್ದರು.

WhatsApp
Facebook
Telegram
error: Content is protected !!
Scroll to Top