ಶಿರಸಿಯಲ್ಲಿ ಗುಡುಗು ಸಹಿತ ಬಾರಿ ಮಳೆ: ಹಾರಿಹೋದ ಮಾರಿ ಜಾತ್ರಾ ಗದ್ದುಗೆ ಚಪ್ಪರ

ಕಂಗಾಲಾದ ಜಾತ್ರಾ ವ್ಯಾಪಾರಸ್ತರು

ಶಿರಸಿ: ತಾಲೂಕಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು ಶಿರಸಿ ಜಾತ್ರೆಯಲ್ಲಿ ವ್ಯಾಪಾರಸ್ತರು ಕಂಗಾಲಾಗಿದ್ದು ವಿಪರಿತ ಮಳೆ ಗಾಳಿಯ ಕಾರಣ ಮಾರಿ ಜಾತ್ರಾ ಗದ್ದುಗೆ ಚಪ್ಪರ ಹಾರಿ ಹೋಗಿದೆ

ಭಕ್ತಾಧಿಗಳು ಶಿರಸಿಯಲ್ಲಿ ಮಹಾಮಾತೆ ಮಾರಿಕಾಂಬ ದೇವಿಯ ಜಾತ್ರೆಯಲ್ಲಿ ಪಾಲ್ಗೊಂಡು ಮಾತೆಯನ್ನು ಕಣ್ತುಂಬಿಸಿಕೊಂಡು ಅವಳ ಸೇವೆ ಮಾಡಿ ಅವಳ ಕ್ರಪಾ ಕಟಾಕ್ಷವನ್ನು ಪಡೆದುಕೊಳ್ಳ ಬೇಕು ಎಂಬ ಮಹದಾಸೆಯಿಂದ ದೂರ ದೂರದಿಂದ ಶಿರಸಿಗೆ ಆಗಮಿಸಿದ್ದರು ವ್ಯಾಪರಸ್ತರು ಕರೋನಾ ಮುಗಿದಿದೆ ಈ ಜಾತ್ರೆಯಲ್ಲಿ ಸ್ವಲ್ಪವಾದರು ವ್ಯಾಪಾರಮಾಡಿ ಸ್ವಲ್ಪ ಮಟ್ಟಿಗಾದರು ಚೇತರಿಸಿಕೊಳ್ಳೊಣ ಎಂಬ ಮಹದಾಸೆಯಿಂದ ಜಾತ್ರೆಗೆ ಬಂದರೆ ಸಂಜೆ 5.30 ರ ಸುಮಾರಿಗೆ ವರುಣನಿಗೆ ಎಲ್ಲಿತ್ತೋ ಕೋಪ ಶಿರಸಿ ಜಾತ್ರಾ ಪೇಟೆಯನ್ನು ಗುಡುಗು ಸಹಿತ ಮಳೆ ಗಾಳಿಯಿಂದ ಸಂಪೂರ್ಣ ಅಸ್ತವ್ಯಸ್ತವನ್ನಾಗಿಸಿ ಬಿಟ್ಟ ವರುಣ ಸುರಿದ ಬಾರಿ ಮಳೆ ಗಾಳಿಗೆ ಜಾತ್ರಾ ಪೇಟೆ ಸಂಪೂರ್ಣ ತತ್ತರಿಸಿ ಹೋಗಿದ್ದು ವ್ಯಾಪಾರಸ್ಥರು ಕಂಗಾಲಾಗಿ ಹೋದರು

ಮಳೆಗಾಳಿಗೆ ಮಾರಿ ಗದ್ದುಗೆಯ ಜಾತ್ರಾ ಚಪ್ಪರ ಸ್ವಾಗತ ಕಮಾನು ಹಾರಿಹೋಗಿದೆ

ಅಕಾಲಿಕ ಮಳೆಯ ಕಾರಣ ಮಣ್ಣು ಕುಸಿದು ಅವಘಡ ಸಂಭವಿಸಿತು ಎಂಬ ಬೀತಿಯಿಂದ ಜಾತ್ರಾ ಪೇಟೆಯಲ್ಲಿ ಹಾಕಿರುವ ಜಾಯಂಟ್ ವೀಲ್ ನ ಕೆಲವು ತೊಟ್ಟಿಲುಗಳನ್ನು ಕಳಚಿಡಲಾಯಿತು

ಒಟ್ಟಾರೆ ಈ ಬಾರಿಯ ಶಿರಸಿ ಜಾತ್ರೆಯಲ್ಲಿ ವರುಣಾರ್ಬಟಕ್ಕೆ ಭಕ್ತಾಧಿಗಳಿಗೆ ಹಾಗು ವ್ಯಾಪಾರಸ್ತರು ಕಂಗಾಲಾಗಿ ಹೋಗಿದಂತು‌ ಸತ್ಯ

WhatsApp
Facebook
Telegram
error: Content is protected !!
Scroll to Top