ಹಿಜಾಬ್ ಇಲ್ಲದೆ ನಾವು ಕಾಲೇಜಿಗೆ ಹೋಗುವುದಿಲ್ಲ, ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಉಡುಪಿ ವಿದ್ಯಾರ್ಥಿನಿಯರ ಸುದ್ದಿಗೋಷ್ಠಿ..!

ಉಡುಪಿ: ಹಿಜಾಬ್ ವಿಚಾರವಾಗಿ ಹೈ ಕೋರ್ಟ್ ತೀರ್ಪು ಬೆನ್ನಲ್ಲೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಉಡುಪಿಯ ಐವರು ವಿದ್ಯಾರ್ಥಿನಿಯರು ಪತ್ರಿಕಾಗೋಷ್ಟಿ ನಡೆಸಿದ್ದಾರೆ. ನಮಗೆ ನ್ಯಾಯಾಲಯದ ಮೇಲೆ ಬಹಳ ನಿರೀಕ್ಷೆ ಇತ್ತು. ವ್ಯವಸ್ಥೆ ಮೇಲೆ ಬಹಳ ಭರವಸೆ ಇತ್ತು. ಧರ್ಮದಲ್ಲಿ ನಮಗೆ ಹಿಜಾಬ್ ಅವಕಾಶ ಇತ್ತು. ಎಲ್ಲಾ ಮುಸ್ಲಿಂ ಮಹಿಳೆಯರು ತಲೆ ಮತ್ತು ಎದೆ ಮುಚ್ಚುವ ಅವಕಾಶ ಇದೆ. ಹೈಕೋರ್ಟ್ನಲ್ಲಿ ತೀರ್ಪು ನಮ್ಮ ವಿರುದ್ಧ ಬಂದಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಕುರಾನ್‌ನಲ್ಲಿ ಹಿಜಾಬ್ ಬಗ್ಗೆ ಉಲ್ಲೇಖವಿದೆ
ನಮಗೆ ನಮ್ಮ ಹಕ್ಕು ಸಿಕ್ಕಿಲ್ಲ. ಹೈಕೋರ್ಟ್ ತೀರ್ಪು ನಮ್ಮ ಪರವಾಗಿ ಬಂದಿಲ್ಲ. ನಮಗೆ ಹಿಜಾಬ್ ಬೇಕು, ಹೀಗಾಗಿ ಕೋರ್ಟ್ ಮೆಟ್ಟಿಲೇರಿದ್ದೆವು. ಹಿಜಾಬ್‌ಗಾಗಿ ನಾವು ಕಾನೂನು ರೀತಿ ಎಲ್ಲ ಪ್ರಯತ್ನ ಮಾಡ್ತೇವೆ. ಕುರಾನ್‌ನಲ್ಲಿ ಹಿಜಾಬ್ ಬಗ್ಗೆ ಉಲ್ಲೇಖವಿದೆ. ನಾವು ಹಿಜಾಬ್‌ ತೆಗೆಯುವುದಿಲ್ಲ, ನಮಗೆ ಶಿಕ್ಷಣ ಬೇಕು. ಹಿಜಾಬ್ ನಿರಾಕರಣೆಯಿಂದ ಎಷ್ಟು ವಿದ್ಯಾರ್ಥಿನಿಯರು ಶಿಕ್ಷಣ ವಂಚಿತರಾಗಿದ್ದಾರೆ. ನಮಗೆ ನಮ್ಮ ಧರ್ಮ, ಶಿಕ್ಷಣ ಎರಡೂ ಮುಖ್ಯವಾದದ್ದು. ಹಿಜಾಬ್​ ಧರಿಸಿ ಪರೀಕ್ಷೆ ಬರೆಯಲು ಸರ್ಕಾರ, ಆಡಳಿತ ಮಂಡಳಿ ಅವಕಾಶ ನೀಡಿದರೆ ಬರೆಯುತ್ತೇವೆ. ಕಾಲೇಜಿಗೆ ಗೈರಾಗಿದ್ದರೂ ಪರೀಕ್ಷೆಗೆ ಸ್ವತಃ ಸಿದ್ಧತೆ ನಡೆಸಿದ್ದೇವೆ. ಕುರಾನ್‌ನಲ್ಲಿ ಹಿಜಾಬ್ ಬಗ್ಗೆ ಉಲ್ಲೇಖವಿದೆ ಎಂದು ಹೇಳಿದ್ದಾರೆ. ಹಿಜಾಬ್ ಉಲ್ಲೇಖವಿರುವ ಬಗ್ಗೆ ವಕೀಲರು ಹೇಳಿದ್ದಾರೆ. ಆಗ ವಕೀಲರ ವಾದವನ್ನು ಒಪ್ಪಿದ್ದಾರೆ. ಆದ್ರೆ ಈಗ ತೀರ್ಪು ಹೀಗೆ ಬಂದಿದೆ, ಏಕೆಂದು ನಮಗೆ ಗೊತ್ತಿಲ್ಲ. ನಮ್ಮ ಹಕ್ಕು ಪಡೆಯುವವರೆಗೂ ಹೋರಾಟ ಮಾಡುತ್ತೇವೆ. ಹಿಜಾಬ್ ಇಲ್ಲದೆ ನಾವು ಕಾಲೇಜಿಗೆ ಹೋಗುವುದಿಲ್ಲ ಎಂದು ವಿದ್ಯಾರ್ಥಿನಿಯರು ಸುದ್ದಿಗೋಷ್ಠಿ ನಡೆಸಿ ತಮ್ಮ ಹಕ್ಕಿಗಾಗಿ ಹೋರಾಟುವುದಾಗಿ ತಿಳಿಸಿದ್ದಾರೆ.

ಹಿಜಾಬ್​ಗೆ ತಡೆ ಅಲ್ಲ.. ಇದು ನಮ್ಮ ಶಿಕ್ಷಣದ ತಡೆ
ರಾಜಕೀಯ ಲಾಭಕ್ಕೆ ಹಿಜಾಬ್ ವಿಚಾರವನ್ನು ಕಮ್ಯೂನಲ್ ಮಾಡಲಾಗಿದೆ. ರಾಜಕೀಯ ದುರುದ್ದೇಶದಿಂದ ದೊಡ್ಡ ಇಶ್ಯೂ ಮಾಡಿದರು. ಎಲ್ಲರ ಶಿಕ್ಷಣಕ್ಕೆ ಬಹಳ ಸಮಸ್ಯೆ ಆಗಿದೆ. ಪ್ರಾಂಶುಪಾಲರು ಹಿಜಾಬ್ ಅವಕಾಶ ಕೊಟ್ಟಿದ್ದರೆ. ಹಿಜಾಬ್​ಗೆ ತಡೆ ಅಲ್ಲ.. ಇದು ನಮ್ಮ ಶಿಕ್ಷಣದ ತಡೆ. ನಮಗೆ ಧರ್ಮ ಮತ್ತು ಶಿಕ್ಷಣ ಬಹಳ ಮುಖ್ಯ. ನಮಗೆ ಎರಡೂ ಅವಕಾಶ ಬೇಕು ಎಂದು ಉಡುಪಿಯಲ್ಲಿ ಆಲಿಯಾ ಅಸಾದಿ ತಿಳಿಸಿದ್ದಾರೆ. ಡಾ. ಬಿ.ಆರ್ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದಾರೆ. ಅಂಬೇಡ್ಕರ್ ಬದುಕಿದ್ದರೆ ಇಂದು ಕಣ್ಣೀರು ಹಾಕುತ್ತಿದ್ದರು. ಸಂವಿಧಾನದ ಈಗಿನ ಪರಿಸ್ಥಿತಿ ನೋಡಿ ಮರುಗುತಿದ್ದರು ಎಂದು ಉಡುಪಿಯಲ್ಲಿ ಅಲ್ಮಾಸ್ ತಿಳಿಸಿದ್ದಾರೆ.

ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ವಿಶ್ವಾಸವಿದೆ. ಹಿಜಾಬ್​​ಗಾಗಿ ನಾವು ಹೋರಾಟ ಮುಂದುವರಿಸುತ್ತೇವೆ. ವಕೀಲರ ಜತೆ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇವೆ. ಹಿಜಾಬ್​ ವಿಚಾರದಲ್ಲಿ ಕೋರ್ಟ್​ ಮೇಲೆ ಒತ್ತಡ ಹಾಕಲಾಗಿದೆ. ತೀರ್ಪಿನಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿದೆ. ಸರ್ಕಾರದ ಒತ್ತಡ ಇರುವುದರಿಂದ ಹಿಜಾಬ್​ ವಿರುದ್ಧ ತೀರ್ಪು ಬಂದಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top