ಅಂಕೋಲ ಖಾಸಗಿ ಶಾಲೆ ನಿರ್ಲಕ್ಷದಿಂದ ಚಾವಣಿಪದರ ಕುಸಿತ-ಐದು ಜನ ವಿದ್ಯಾರ್ಥಿಗಳಿಗೆ ಗಾಯ..!

ಕಾರವಾರ; ಶಾಲೆಯ ಕಟ್ಟಡ ಮೇಲ್ಚಾವಣಿ ಪದರ ಕುಸಿದು ಐದು ಜನ ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ನಗರದ ನಿರ್ಮಲ ಕಾನ್ವೆಂಟ್ ಶಾಲೆಯಲ್ಲಿ ಇಂದು ನಡೆದಿದೆ.

ಅಂಕೋಲದ ನಿರ್ಮಲ ಕಾನ್ವೆಂಟ್ ಶಾಲೆಯ ನಾಲ್ಕನೇ ತರಗತಿ ಕೊಠಡಿಯಲ್ಲಿ ಮೇಲ್ಚಾವಣಿಯ ಪದರ ಕುಸಿದಿದ್ದು ಈ ಸಂದರ್ಭದಲ್ಲಿ ಪಾಠ ಕೇಳುತಿದ್ದ ಮೂರು ಜನ ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದ್ದು ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಾಯಗೊಂಡ ವಿದ್ಯಾರ್ಥಿಗಳನ್ನು ಅಂಕೋಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಸ್ಥಳಕ್ಕೆ ಅಂಕೋಲದ ಬಿಇಓ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

WhatsApp
Facebook
Telegram
error: Content is protected !!
Scroll to Top