ಈ ಆ್ಯಪ್ ಬಳಸಿ, ಕಳೆದು ಹೋದ ಸ್ಮಾರ್ಟ್​ಫೋನ್ ಸಿಕ್ಕೇ ಸಿಗುತ್ತೆ!

ಕಳೆದು ಹೋದ ಸ್ಮಾರ್ಟ್​ಫೋನ್​ಗೆ (Smartphone) ಚಿಂತೆ ಮಾಡುವುದಲ್ಲದೆ, ಅದನ್ನು ಹುಡುಕೋದು ಹೇಗೆ ಎಂಬ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಅದರಲ್ಲೂ ನಗರ ಪ್ರದೇಶದಲ್ಲಂತೂ ಸ್ಮಾರ್ಟ್​ಫೋನ್​ ಕಳೆದು (Lost) ಹೋದರೆ ಅದನ್ನು ಹುಡುಕಾಡುವ ಪ್ರಯತ್ನವನ್ನೇ ಕೈ ಬಿಡುತ್ತಾರೆ. ಆದರೆ ಬೆಂಗಳೂರಿನಂತಹ (Bengaluru) ನಗರದಲ್ಲಿ ಕಳೆದು ಹೋದ ಸ್ಮಾರ್ಟ್​ಫೋನನ್ನು ಮರಳಿ ಹಿಂತಿರುಗಿಸುವ ಕೆಲಸವನ್ನು ಕೆಂಗೇರಿ (Kengeri) ಪೊಲೀಸರು (Police) ಮಾಡಿದ್ದಾರೆ. ಅವರ ಈ ಕೆಲಸಕ್ಕೆ ಸ್ಮಾರ್ಟ್​ಫೋನ್​ ವಾರಸ್ಧಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಸ್ಮಾರ್ಟ್​ಫೋನ್​ ಬಿದ್ದು ಸಿಕ್ಕರಂತೂ ಸಿಗುವುದೇ ಡೌಟ್​. ಆದರೆ ಸಿಕ್ಕ ಫೋನನ್ನು ಹಿಂತಿರುಗಿ ನೀಡುವವರು ಕಡಿಮೆ. ಆದರೆ ಈ ದೊಡ್ಡ ನಗರದಲ್ಲಿ ಬಿದ್ದು ಸಿಕ್ಕ ಫೋನನ್ನು ಮರಳಿ ಅದರ ಯಜಮಾನನಿಗೆ ಕೊಡಿವು ಕೆಲಸವನ್ನು ಕೆಂಗೇರಿ ಪೊಲೀಸ್​​ ಠಾಣೆಯ ಪೊಲೀಸರು ಮಾಡಿದ್ದಾರೆ. ಅಂದಹಾಗೆಯೇ ಒಂದು, ಎರಡು ಸ್ಮಾರ್ಟ್​ಫೋನ್​ ಅಲ್ಲವೇ ಅಲ್ಲ. ಬಿದ್ದ ಸಿಕ್ಕ ಲೆಕ್ಕವಿಲ್ಲದಷ್ಟು ಫೋನನ್ನು ಹಿಂತಿರುಗಿಸಿ ಕೊಡುವ ಮೂಲಕ ಮೆಚ್ಚುಗೆಯ ಕಾರ್ಯಕ್ಕೆ ಪಾತ್ರರಾಗಿದ್ದಾರೆ.

ಸಾಮಾನ್ಯವಾಗಿ ಸ್ಮಾರ್ಟ್​ಫೋನ್​ ಅನ್ನು ಯಾರು ಬಳಸಬಾರದೆಂದು ಮತ್ತು ಸುರಕ್ಷತೆಗೆಂದದು ಲಾಕ್​ ಮಾಡುತ್ತೇವೆ. ಅದಕ್ಕೆ ಪಿನ್​ ಅಥವಾ ಕೋಡ್​ ಬಳಸಿ ಲಾಕ್ ಮಾಡುತ್ತೇವೆ. ಹಾಗಿದ್ದಾಗ ಬಿದ್ದ ಸಿಕ್ಕರೂ ಅದನ್ನು ಸುಲಭವಾಗಿ ಓಪನ್​ ಮಾಡಲು ಸಾಧ್ಯವಿಲ್ಲ. ಆದರೆ ಪೊಲೀಸರು ಹೇಗೆ ಬಿದ್ದು ಸಿಕ್ಕ ಫೋನನ್ನು ಪತ್ತೆ ಹಚ್ಚಿ ಪಿರ್ಯಾದುದಾರಿಗೆ ನೀಡಿದ್ದಾರೆ?.

ಸ್ಮಾರ್ಟ್​​ಫೋನ್​​ ಕಳೆದು ಹೋದರೆ ಹೀಗೆ ಮಾಡಿ

ಸ್ಮಾರ್ಟ್​ಫೋನ್​ ಕಳೆದು ಹೋದರೆ. ಆ ಸ್ಮಾರ್ಟ್​ಫೋನ್​ನಲ್ಲಿ ಮುಖ್ಯ ಮಾಡಹಿತಿ ಅಡಗಿದ್ದು, ಅದನ್ನು ಮರಳಿ ಪಡೆಯಬೇಕಾದರೆ ಮೊದಲು ಪೊಲೀಸರಿಗೆ ದೂರು ನೀಡಬೇಕಿದೆ. ಅದಕ್ಕಾಗಿ ಮೊದಲು KSP eLost App ಡೌನ್​ಲೋಡ್​​ ಮಾಡಬೇಕು. ನಂತರ ಈ ಆ್ಯಪ್​ ಮೂಲಕ ದೂರು ದಾಖಲಿಸಬೇಕು. ಸ್ಮಾರ್ಟ್​ಫೋನ್​ ವಿವರ ಸೇರಿದಂತೆ ಆ್ಯಪ್​ಕೇಲುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕು. ಹೀಗೇ ಕಳೆದು ಹೋಗಿದ್ದ ಸ್ಮಾರ್ಟ್​ಫೋನನ್ನು ಹುಡುಕಿಕೊಡುವಲ್ಲಿ ಪೊಲೀಸರ ಮೊರೆ ಹೋದ ಅನೇಕರಿಗೆ ತಮ್ಮ ಸ್ಮಾರ್ಟ್​ಫೋನ್ ಮರಳಿ ದೊರೆತಿದೆ.

ಕೆಂಗೇರಿ ಪೊಲೀಸರು ಸುಮಾರು 10 ಪಿರ್ಯಾದುದಾರರ ಕಳೆದ ಹೋದ ಸ್ಮಾರ್ಟ್​ಫೋನನ್ನು ಪತ್ತೆಹಚ್ಚಿ ಮರಳಿ ಹಿಂತಿರುಗಿ ನೀಡಿದ್ದಾರೆ. ಇವರ ಸಾಧನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೊಂದು ಉತ್ತಮ ಕಾರ್ಯವೆಂದು ಹೊಗಳಿದ್ದಾರೆ.

ಐಎಎಸ್​ ಆಫೀಸರ್​​ ಆಗಿರುವ ಡಾಕ್ಟರ್​​ ಸಂಜೀವ್​ ಎಮ್​ ಪಾಟೀಲ್​ ಅವರು ಕೆಂಗೇರಿ ಪೊಲೀಸರು ಮಾಡಿದ ಉತ್ತಮ ಕಾರ್ಯವನ್ನು ತಮ್ಮ ಟ್ವಿಟ್ಟರ್​ ಪುಟದಲ್ಲಿ ಹಂಚಿಕೊಂಡಿದ್ದಾರೆ. ಸ್ಮಾರ್ಟ್​ಫೋನ್​ ಕಾಣೆಯಾಗಿದೆ ಎಂದು ದೂರು ನೀಡಿದವರಿಗೆ ಕೆಂಗೇರಿ ಪೊಲೀಸರು ಅದನ್ನು ಪತ್ತೆ ಹಚ್ಚಿ ಮರಳಿ ಫೋನ್​ ನೀಡುವ ಫೋಟೋವನ್ನು ಶೇರ್​ ಮಾಡಿದ್ದಾರೆ.

ನಗರ ಪ್ರದೇಶದಲ್ಲಿ ಬಿದ್ದು ಹೋದ ವಸ್ತುಗಳು ಮತ್ತೆ ಮರಳಿ ಸಿಗುತ್ತದೆ ಎಂಬುದು ದೊಡ್ಡ ಕನಸಿನ ಮಾತೆ. ಆದರೆ ಕೆಲವರು ಕಳೆದ ಹೋದ ಫೋನನ್ನು ಪತ್ತೆ ಮಾಡಿ ಹಿಂತಿರುಗಿಸುವ ಕೆಲಸವನ್ನು ಮಾಡುತ್ತಾರೆ. ಮಾನವೀಯತೆ ಮೆರೆಯುತ್ತಾರೆ. ಆದರೀಗ ಬೆಂಗಳೂರು ವಾಸಿಗರು KSP eLost App  ಮೂಲಕ ದೂರು ದಾಖಲಿಸಿಕೊಂಡು ಫೋನನ್ನು ಮರಳಿ ಪಡೆಯಬಹುದಾಗಿದೆ. ಅಷ್ಟರ ಮಟ್ಟಿಗೆ ಈ ಆ್ಯಪ್​ ಸಹಾಯ ಪಡೆಯಬಹುದಾಗಿದೆ.

WhatsApp
Facebook
Telegram
error: Content is protected !!
Scroll to Top