ಉತ್ತರಕನ್ನಡ(ದಾಂಡೇಲಿ): ಇಳಿಜಾರಿನಲ್ಲಿ ಸೈಕಲ್ ನಿಯಂತ್ರಣಕ್ಕೆ ಸಿಗದೆ ಮರಕ್ಕೆ ಡಿಕ್ಕಿ ಹೊಡೆದು ಯುವತಿಯೊಬ್ಬಳು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ಇಳಿಜಾರಿನಲ್ಲಿ ಸೈಕಲ್ ನಿಯಂತ್ರಣಕ್ಕೆ ಸಿಗದೆ ಮರಕ್ಕೆ ಡಿಕ್ಕಿ ಹೊಡೆದು ಛತ್ತೀಸಗಡ ಮೂಲದ ದೇವಿಕಾ ಸಂಜಯ ವಾಸ್ವಾನಿ (25) ಮೃತಪಟ್ಟ ದುರ್ದೈವಿ. ಬೀರಂಪಾಲಿ ಗ್ರಾಮದಲ್ಲಿರುವ ಹೋಂ ಸ್ಟೇನಿಂದ ಸೈಕ್ಲಿಂಗ್ ಮಾಡುತ್ತಾ ದೇವಿಕಾ ಸಂಜಯ ವಾಸ್ವಾನಿ ಅಕೋಡಾ ಗ್ರಾಮದ ಕಡೆ ಹೋಗುತ್ತಿದ್ದರು. ಆಗ ಏಕಾಏಕಿ ಸೈಕಲ್ ಸ್ಕಿಡ್ ಆಗಿದೆ ಈ ವೇಳೆ ವೇಗವನ್ನು ನಿಯಂತ್ರಿಸಲಾಗದೆ ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಸೈಕಲ್ ಡಿಕ್ಕಿ ಹೊಡೆದಿದೆ.